ಕಲ್ಪನೆಯಿಂದ ಪೊಳಲಿಗೆ ತಿರಂಗಯಾತ್ರೆ
ಪೊಳಲಿ: ಸ್ವಾತಂತ್ರೋತ್ಸವ ಅಮ್ರತ ಮಹೋತ್ಸವದ ಅಂಗವಾಗಿ ದಿನಾಂಕ ಆ.15ರಂದು ಸೋಮವಾರ ಕಲ್ಪನೆಯಿಂದ ಪೊಳಲಿಯನ್ನು ಸಂಪರ್ಕಿಸುವ ವಿವೇಕಾನಂದ ರಸ್ತೆಯಲ್ಲಿ ತಿರಂಗಯಾತ್ರೆ ನಡೆಯಿತು. ಈ ತಿರಂಗ ಯಾತ್ರೆಯಲ್ಲಿ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.

ಕಾರ್ಯಕ್ರಮ ದ ಬೌಧ್ಧಿಕ್ ನ್ನು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಮಿತಿ ಸದಸ್ಯರಾದ ರಾಧಾಕೃಷ್ಣ ಅಡ್ಯಂತಾಯ ಇವರು ಮಾಡಿದರು.

ತಿರಂಗ ಯಾತ್ರೆಯ ನೇತ್ರತ್ವವನ್ನು ವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರಿಯಂಗಳ ಮಂಡಲ ಸಹ ಕಾರ್ಯವಾಹ ರಾದ ಜಗದೀಶ್ ಬಡಗಬೆಳ್ಳೂರು, ವಿಶ್ವಹಿಂದೂ ಪರಿಷತ್ ತಾಲೂಕು ಉಪಾದ್ಯಕ್ಷರಾದ ಸುರೇಶ್ ಬೆಂಜನಪದವು, ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ತಿರುಲೇಶ್ ಬೆಳ್ಳೂರು, ರಾಮಕೃಷ್ಣ ತಪೋವನ ಪೊಳಲಿ ಇದರ ಪರವಾಗಿ ರಾಘವೇಂದ್ರ ಪೊಳಲಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೆಂಕಟೇಶ್ ನಾವಡ ಪೊಳಲಿ, ಜಿಲ್ಲಾ ಯುವಮೋರ್ಚ ದ ಕಾರ್ಯಕಾರಿಣಿ ಸದಸ್ಯರಾದ ಕಿಶೋರ್ ಪಲ್ಲಿಪಾಡಿ, ಬಿಜೆಪಿ ಬಂಟ್ವಾಳ ಮಂಡಲದ ಅದ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ, ಪ್ರದಾನ ಕಾರ್ಯದರ್ಶಿಯಾದ ಡೊಂಬಯ್ಯ ಅರಳ, ಹಿಂದುಳಿದ ವರ್ಗಗಳ ಮೋರ್ಚದ ಪ್ರಮುಖರಾದ ಉಮೇಶ್ ಅರಳ, ಮೋಹನ್ ದಾಸ್ ಕೊಟ್ಟಾರಿ ಬಾಳಿಕೆ, ಪ್ರಮುಖರಾದ ಮಲ್ಲಿಕಾ ಆಗ್ರೋ ಆಯಿಲ್ಸ್ ನ ಮಾಲಕರಾದ ಜಯರಾಮಕೃಷ್ಣ ಪೊಳಲಿ, ಸೋಮಶೇಖರ್ ಶೆಟ್ಟಿ ಕಲಾಯಿ, ನಂದರಾಮ್ ರೈ, ಯಶೋಧರ ಕಲ್ಕುಟ ರೂಪೇಶ್ ಕುರಿಯಾಳ ಯುವರಾಜ್ ಪೂಂಜ ಬಡಗಬೆಳ್ಳೂರು, ಸುಖೇಶ್ ಚೌಟ, ಪ್ರಕಾಶ್ ಬೆಳ್ಳೂರು, ಚಂದ್ರಶೇಖರ್ ಶೆಟ್ಟಿ ಬಡಕಬೈಲ್, ಅಶೋಕ್ ಬಡಕಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಕೋಟ್ಯಾನ್ ಕಲ್ಕುಟ, ಕಾರ್ತಿಕ್ ಬಳ್ಳಾಲ್ ,ಅಶ್ವಥ್ ರಾವ್ ಬಾಳಿಕೆ, ಶಶಿಕಿರಣ್ ಬಡಗಬೆಳ್ಳೂರು ಲೋಕೇಶ್ ಲಚ್ಚಿಲ್, ಕರಿಯಂಗಳ ಮಂಡಲದ ವಿಶ್ವಹಿಂದೂ ಪರಿಷತ್ ಬಜರಂಗದಳ, ಹಿಂದೂ ಜಾಗರಣ ವೇದಿಕೆ ,ಬಿಜೆಪಿ, ಹಲವಾರು ಯುವಕ ಮಂಡಲ, ಭಜನಾ ಮಂಡಳಿಗಳ ಸದಸ್ಯರುಗಳು ಹಾಗೂ ದೇಶಭಕ್ತ ಬಂಧುಗಳು ಈ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು.
ಹರೀಶ್ ಮಣಿಕಂಠಪುರ ಇವರು ವಂದೇಮಾತರಂ ಹಾಡಿದರು, ಕಿಶೋರ್ ಪಲ್ಲಿಪಾಡಿ ಸ್ವಾಗತಿಸಿ ಧರ್ಮ ಜಾಗರಣ ತಾಲೂಕು ಸಂಯೋಜಕರಾದ ಸಂದೀಪ್ ಕಮ್ಮಾಜೆ ಇವರು ವಂದನಾರ್ಪಣೆ ಮಾಡಿದರು. .