ಬಂಟ್ವಾಳ: ಕ್ರೇನ್ ನಲ್ಲಿ ಬೃಹತ್ ಗಾತ್ರದ ಧ್ವಜ ಹಾರಾಟ ದೇಶದ ಆಥರ್ಿಕತೆಗೆ ವೇಗ ಸಿಕ್ಕಿದೆ: ಶಾಸಕ ರಾಜೇಶ ನಾಯ್ಕ್ ಬಂಟ್ವಾಳ: ಕೋವಿಡ್ ಮಹಾಮಾರಿಯಿಂದ ಜಾಗತಿಕ ಮಟ್ಟದಲ್ಲಿ ಆಥರ್ಿಕತೆ ಹಿನ್ನಡೆಯಾದರೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಿಡಿಪಿ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ. ದೇಶದ ಜನತೆಗೆ ಉಚಿತ ಅಕ್ಕಿ ಮತ್ತು ಉಚಿತ ಲಸಿಕೆ ವಿತರಿಸಿದ ಪ್ರಧಾನಿ ಕರೆಯಂತೆ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಕೋಟ್ಯಾಂತರ ಮಂದಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಬ್ರಮ ಪಟ್ಟಿದ್ದಾರೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧ ಎದುರು ಸೋಮವಾರ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕಳೆದ 4 ವರ್ಷಗಳ ಅವಧಿಯಲ್ಲಿ ಶಾಂತಿ ನೆಲೆಸಲು ಸಹಕರಿಸಿದ ಕ್ಷೇತ್ರದ ಜನತೆಗೆ ಅಭಾರಿಯಾಗಿದ್ದೇನೆ ಎಂದರು. ತಹಶೀಲ್ದಾರ್ ಡಾ.ಸ್ಮಿತಾ ರಾಮು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ‘ಹರ್ ಘರ್ ತಿರಂಗ’ ದೇಶಕ್ಕೆ ಹೆಮ್ಮೆ ಎಂದರು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತ ಡಿಸೋಜ, ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಕಲಾವಿದ ಮಂಜು ವಿಟ್ಲ ಇದ್ದರು. ಆರಂಭದಲ್ಲಿ ವಿವಿಧ ಶಾಲೆಗಳ ವಿದ್ಯಾಥರ್ಿಗಳು ಸಹಿತ ಸ್ಕೌಟ್ಸ್ ಗೈಡ್ಸ್, ಗೃಹರಕ್ಷಕ ದಳ, ಪೋಲೀಸರಿಂದ ಆಕರ್ಷಕ ಪಂಥ ಸಂಚಲನ ನಡೆಯಿತು.