ನಾವೂರು: ‘ಕಾಂಗ್ರೆಸ್ ನಡೆ ಬೂತ್ ಕಡೆ’ ಕಾರ್ಯಕ್ರಮ ಬೂತ್ ಅಧ್ಯಕ್ಷರಿಗೆ ತೆಂಗಿನ ಸಸಿ ವಿತರಿಸಿದ ಮಾಜಿ ಸಚಿವ ರೈ
ಬಂಟ್ವಾಳ: ತಾಲ್ಲೂಕಿನ ನಾವೂರು ವಲಯ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಆ.07ರಂದು ಭಾನುವಾರ ಏರ್ಪಡಿಸಿದ್ದ ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ತೆಂಗಿನ ಸಸಿ ವಿತರಿಸಿದರು.
ಮುಂಬರುವ ಚುನಾವಣೆಯಲ್ಲಿ ಮತದಾರರ ಆಶೀರ್ವಾದ ಸಿಕ್ಕಿದರೆ ಕಳೆದ ಅವಧಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವುದಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ನಾವೂರು ವಲಯ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಭಾನುವಾರ ಏರ್ಪಡಿಸಿದ್ದ ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷರಿಗೆ ತೆಂಗಿನ ಸಸಿ ವಿತರಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಮುಂಬರುವ ಎಲ್ಲಾ ಚುನಾವಣೆ ಎದುರಿಸಲು ನಾವೆಲ್ಲರೂ ಕಠಿಣ ಶ್ರಮ ಮತ್ತು ಸಂಘಟಿತರಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪುಷ್ಪರಾಜ್ ನಾವೂರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಪ್ರಮುಖರಾದ ಮೊಹಮ್ಮದ್ ನಾವೂರ, ಫಾರೂಕ್ ನಾವೂರ, ಸುವರ್ಣ ಕುಮಾರ್ ಜೈನ್, ಯೋಗೀಶ್ ಬಂಗೇರ, ಎ.e.ಮೊರಾಸ್, ಮಾರ್ಕ್ ತಾವ್ರೋ, ಐವನ್ ತಾವ್ರೋ, ನೋರ್ಬರ್ಟ್ ಪಿಂಟೊ, ತೋಮಸ್ ಪಾಯಿಸ್, ಕೆನ್ಯೂಟ್ ತಾವ್ರೋ, ಅಪ್ಪು ಪಾಯಿಸ್, ಅಝೀದ್ ನಾವೂರ, ಅಬ್ದುಲ್ ಕರೀಂ, ಹಿಲ್ಡಾ ಡಿಸೋಜಾ, ಅಚ್ಚು ಪಾಂಗೋಡಿ, ದಿನೇಶ್ ಕೊಟ್ಯಾನ್ ಇದ್ದರು.