ಗುಡ್ಡೆಯಂಗಡಿ: ಓಂ ಜನಹಿತಾಯ ಶಾಲೆ ‘ಆಟಿದ ಮಿನದನ’ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಆಟಿದ ಮಿನದನ’ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿದರು. ಶಾಲಾ ಸಂಸ್ಥಾಪಕ ಶಾಂತರಾಮ ಶೆಟ್ಟಿ ಇದ್ದಾರೆ.
ಬಂಟ್ವಾಳ ಆಷಾಢ ತಿಂಗಳು ಕೃಷಿಕರ ಜೀವನ ಪದ್ಧತಿ ಮತ್ತು ಔಷಧೀಯ ಗುಣದ ನೈಸರ್ಗಿಕ ಆಹಾರ ಸೇವನೆ ಮಹತ್ವ ಬಗ್ಗೆ ಮಕ್ಕಳಿಗೆ ತಿಳಿಸುವ ಮಹತ್ತರ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ ಎಂದು ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.08ರಂದು ಸೋಮವಾರ ಏರ್ಪಡಿಸಿದ್ದ ‘ಆಟಿದ ಮಿನದನ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಶಾಲಾ ಸಂಸ್ಥಾಪಕ ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಟ್ರಸ್ಟಿ ಅತಿಕಾ ಶೆಟ್ಟಿ, ವನಿತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ, ಆಡಳಿತಾಧಿಕಾರಿ ರಕ್ಷಾ ಆರ್.ಶೆಟ್ಟಿ ಇದ್ದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಆಟಿ ಕಳೆಂಜ ಸಹಿತ ವಿವಿಧ ಜಾನಪದ ನೃತ್ಯ, ರಸಪ್ರಶ್ನೆ ನಡೆಯಿತು. ತುಳುನಾಡಿನ ಪಾರಂಪರಿಕ ವಸ್ತುಪ್ರದರ್ಶನ ಮತ್ತು ಆಹಾರ ಮೇಳ ನಡೆಯಿತು. ಮುಖ್ಯಶಿಕ್ಷಕ ಮಹೇಶ ಶೆಟ್ಟಿ ಸ್ವಾಗತಿಸಿ, ಪೂಜಾಶ್ರೀ ವಂದಿಸಿದರು. ರೇವತಿ ಮತ್ತು ಶಿಲ್ಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.