ಫುಟ್‌ಬಾಲ್ ಸ್ಪರ್ಧೆ : ಕು| ಶ್ರೇಯ ಗುರುರಾಜ್ ಭಟ್ ತಂಡ ವಿಜೇತ
ಮುಂಬಯಿ: ಮಹಾರಾಷ್ಟ್ರದ ಪಾಲ್ಫಾರ್ ಜಿಲ್ಲೆಯಲ್ಲಿ ಇತ್ತೀಚಿಗೆ ಜರುಗಿದ ಅಂತರ್ ಜಿಲ್ಲಾ ಫುಟ್‌ಬಾಲ್ ಸ್ಪರ್ಧೆಯಲ್ಲಿ ಮುಂಬಯಿ ತಂಡವು ಫೈನಲ್‌ನಲ್ಲಿ ವೈಫೈ ಮುಂಬಯಿ ತಂಡವು ಕೋಲ್ಹಾಪುರ್ ತಂಡವನ್ನು ೩-೨ ಗೋಲ್‌ನಿಂದ ಸೋಲಿಸಿ ಚಾಂಪಿಯನ್‌ಶಿಪ್ ವಿಜೇತಗೊಂಡಿತು. ವೆಸ್ಟರ್ನ್ ಇಂಡಿಯಾ ಫುಟ್‌ಬಾಲ್ ಅಸೋಸಿಯೇಶನ್ (ವೈಫೈ ಮುಂಬಯಿ) ತಂಡದ ಕು| ಶ್ರೇಯ ಗುರುರಾಜ್ ಭಟ್ ಆಗಿದ್ದಾರೆ. ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ ಸಯಾನ್) ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯ ಉಡುಪಿ ಮೂಲದ ಎಲ್ಲೂರು ಗುರುರಾಜ್ ಭಟ್ ಹಾಗು ಬೆಳ್ಮಾರ್ ಅನಿತಾ ಗುರುರಾಜ್ ಭಟ್ ದಂಪತಿ ಸುಪುತ್ರಿ.