Published On: Mon, Aug 8th, 2022

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ ಸ್ವರ್ಗೀಯ ತೋನ್ಸೆ ಮೋಹನದಾಸ್ ಪೈ ಅವರಿಗೆ ಕಪಸಮ ಶ್ರದ್ಧಾಂಜಲಿ


ಮುಂಬಯಿ : ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿಮಿಟೆಡ್ ಮೂಲಕ ಉದಯವಾಣಿ ರಾಷ್ಟ್ರೀಯ ಕನ್ನಡ ದೈನಿಕದ ಸಂಸ್ಥಾಪಕರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ತೋನ್ಸೆ ಮೋಹನದಾಸ್ ಪೈ ಅವರಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪರವಾಗಿ ನುಡಿ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್ ಸಭಾಗೃಹದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಉಪಸ್ಥಿತರಿದ್ದು ಮೋಹನದಾಸ್ ಪೈ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಬಾಷ್ಪಾಜಲಿ ಕೋರಿದರು. ಉಪಸ್ಥಿತ ಗಣ್ಯರು, ಸದಸ್ಯರು ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪತ್ರಕರ್ತರ ಸಂಘದ ಗೌರವ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿದ್ದು ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ (ದಯಾನಂದ್) ನುಡಿ ನಮನ ಸಲ್ಲಿಸಿದರು. ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ನ ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ಭಾಗವಹಿಸಿ ತೋನ್ಸೆ ಜನತೆ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ಸರ್ಕಾರದ ಹರ್ ಘರ್ ತಿರಂಗ ಅಭಿಯಾನವಾಗಿಸಿ ಉಪಸ್ಥಿತ ಸದಸ್ಯರಿಗೆ ಜಯಕೃಷ್ಣ ಎ.ಶೆಟ್ಟಿ ರಾಷ್ಟçದ ತ್ರಿವರ್ಣ ಧ್ವಜ ವಿತರಿಸಿದರು. ಕೇಂದ್ರ ಸರ್ಕಾರದ ಆದೇಶದಂತೆ ಆ. ೧೩ರಿಂದ ೧೫ರ ತನಕ ತಮ್ಮತಮ್ಮ ಕಚೇರಿ, ನಿವಾಸಗಳಲ್ಲಿ ರಾಷ್ಟ್ರ ಗೌರವ ಕಾಪಾಡಿ ಧ್ವಜವನ್ನು ಹಾರಿಸುವಂತೆ ರೋನ್ಸ್ ಬಂಟ್ವಾಳ್ ತಿಳಿಸಿದರು.

ಜಯಕೃಷ್ಣ ಶೆಟ್ಟಿ ಮತನಾಡಿ ೫೦ ವರ್ಷಗಳ ಹಿಂದೆ ಉದಯವಾಣಿ ಪತ್ರಿಕೆಯನ್ನು ಸ್ಥಾಪಿಸಿ ನಂ. ೧ ಪತ್ರಿಕೆಯನ್ನಾಗಿ ಹೇಗೆ ಮಾಡಬೇಕೆಂಬ ಕನಸು ಕಂಡವರು ಮೋಹನದಾಸ್ ಪೈ ಅವರು. ಈಗಾಲೂ ಕರ್ನಾಟಕದಲ್ಲಿ ಹಿಂದಿನ ವೈಶಿಷ್ಟ್ಯವನ್ನು ಊಳಿಸಿ ಕೊಂಡು ಬಂದಿದೆ ಈ ಪತ್ರಿಕೆ. . ಮನುಕುಲ ಜೀವನ ಅನ್ನುವುದು ಅಪರ್ಯಪ್ತ. ಆದ್ದರಿಂದ ನಾವು ಜೀವನವನ್ನು ಆನಂದಿಸಿ ಬಾಳಬೇಕು.ಜೀವನದಲ್ಲಿ ತಮ್ಮಪರಿವಾರವನ್ನು ನೋಡಿಕೊಂಡು ಸಮಾಜ ಸೇವೆಗೂ ತೊಡಗಿಸಿಕೊಳ್ಳಬೇಕು. ಇದು ಶಾಶ್ವತವಾಗಿ ಬಿಟ್ಟು ಹೋಗುವಂತಹದ್ದು, ಅಂತಹ ವಕ್ತಿತ್ವವನ್ನು ಮೈಗೂಡಿಸಿಕೊಂಡ ಪೈ ಅವರು ಇದಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ತಂದೆಯವರು ಕಟ್ಟಿದ ಸಂಸ್ಥೆಯಗಳ್ಳನ್ನು ಎಲ್ಲಾ ಮಕ್ಕಳು ಸೇರಿಕೊಂಡು ಉನ್ನತ ಮಟ್ಟಕ್ಕೆ ಕೊಂಡೊಯಿದ್ದಾರೆ. ಪ್ರತಿಷ್ಠಿತ ಬಾಳ್ವೆಗೆ ಈ ಪೈ ಪರಿವಾರದ ಸೇವೆ ಸರ್ವ ಶ್ರೇಷ್ಠವಾದುದು ಎಂದರು.

ರೋನ್ಸ್ ಬಂಟ್ವಾಳ್ ಮಾತನಾಡಿ ರಾಷ್ಟ್ರದ ಮುನ್ನಡೆಯ ಸೂಕ್ಷ್ಮವಾದ ದೂರದೃಷ್ಠಿಯನ್ನಿರಿಸಿ ಪತ್ರಿಕಾರಂಗಕ್ಕೆ ಮೋಹನದಾಸ್ ಪೈ ಅವರ ಕೊಡುಗೆ ಅನನ್ಯವಾದುದು. ಅವರ ನಿಷ್ಠೆ, ಪರಿಶ್ರಮದಿಂದ ಕನ್ನಡ ದೈನಿಕವೊಂದು ಜಾಗತಿಕವಾಗಿ ಪ್ರಸಿದ್ಧಿ ಪಡೆಯುವ ಜೊತೆಗೆ ಬಲಿಷ್ಠ ರಾಷ್ಟç ಕಟ್ಟುವಲ್ಲೂ ಪೂರಕವಾಗಿದೆ. ರಾಷ್ಟ್ರದ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಶುಭಾವಸರದಲ್ಲಿ ಕಪಸಮ ಸಂಸ್ಥೆಯೂ ತನ್ನ ಹದಿನೈದನೇ ವಾರ್ಷಿಕೋತ್ಸವದ ಸಡಗರದಲ್ಲಿದ್ದು ಸೇವೆಯ ಮೂಲಕವೇ ಸಾಂಘಿಕತೆಯನ್ನು ರೂಢಿಸಲಿದೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಜೊತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ನಾಗೇಶ್ ಪೂಜಾರಿ ಏಳಿಂಜೆ, ಅನಿತಾ ಪಿ.ಪೂಜಾರಿ ತಾಕೋಡೆ, ಕರುಣಾಕರ್ ವಿ.ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಗ್ರೇಗೋರಿ ಡಿ’ಅಲ್ಮೇಡಾ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಡಾ| ಶಿವ ಮೂಡಿಗೆರೆ ಸ್ವಾಗತಿಸಿದರು. ಸಾ.ದಯಾ ಕಾರ್ಯಕ್ರಮ ನಿರೂಸಿದರು. ಸವಿತಾ ಎಸ್.ಶೆಟ್ಟಿ ಆಭಾರ ಮನ್ನಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter