ಗುರುಪುರ ಗ್ರಾ.ಪಂ.ಸಭಾಭವನದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಚದುರಂಗ(ಚೆಸ್) ಆಡೋಣ ಅಭಿಯಾನ’
ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.01ರಂದು ಸೋಮವಾರ ಸ್ಥಳೀಯ ಪ್ರಾಥಮಿಕ ಮತ್ತು ಹೈಸ್ಕೂಲ್ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪರಿಚಯಿಸಿರುವ ‘ಓದುವ ಬೆಳಕು'
ಕಾರ್ಯಕ್ರಮದಡಿ
ಗ್ರಾಮ ‘ಚದುರಂಗ(ಚೆಸ್) ಆಡೋಣ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಪಂದ್ಯಾಟ ಉದ್ಘಾಟಿಸಿದ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, ಚೆಸ್ ಆಟದಿಂದ ಶಾಲಾ ಮಕ್ಕಳ ಬೌದ್ಧಿಕ ಮಟ್ಟ ವೃದ್ಧಿಸುತ್ತದೆ. ಮಕ್ಕಳ ಶಾಲಾ ಕಲಿಕೆಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.

ಪಿಡಿಒ ಅಬೂಬಕ್ಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಗ್ರಾಮೀಣ ಮಟ್ಟದ ಶಾಲಾ ಮಕ್ಕಳಿಗಾಗಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಕ್ರೀಡೆಯಲ್ಲೂ ತಮ್ಮ ಸಾಮರ್ಥ್ಯ ವ್ಯಕ್ತಪಡಿಸಿ ಗ್ರಾಮಕ್ಕೆ ಹೆಸರು ತಂದು ಕೊಡಬೇಕು ಎಂದರು.

ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರಾಥಮಿಕ ಮತ್ತು ಹೈಸ್ಕೂಲ್, ಬೆಥನಿ ಹೈಸ್ಕೂಲ್ ಹಾಗೂ ಗುರುಪುರದ ಸರ್ಕಾರಿ ಪ್ರೌಢಶಾಲಾ ಮಕ್ಕಳು ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಜಿ. ಎಂ. ಉದಯ ಭಟ್, ಸಚಿನ್ ಅಡಪ, ಬುಶ್ರಾ, ಕಾರ್ಯದರ್ಶಿ ಅಶೋಕ್, ಪಂದ್ಯಾಟ ನಿರ್ವಾಹಕರಾದ ಸುದರ್ಶನ್, ಅಶ್ವಿತಾ, ಇರ್ಶಾದ್ ಮತ್ತು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.