ಸೆ.2ರಂದು ಪ್ರಧಾನಿ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಪ್ರದರ್ಶನಕ್ಕೆ ಸಿದ್ಧತೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೆ.02ರಂದು ಶುಕ್ರವಾರ ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮದಲ್ಲಿ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಡೆಯುತ್ತಿರುವ ಚರ್ಚೆಯ ಆಧಾರದಲ್ಲಿ ಎರಡು ಪ್ರಕರಣಗಳನ್ನು ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದು
ಒಂದು ಪ್ರಕರಣದಲ್ಲಿ ನಳಿನ್ ಕುಮಾರ್ ಅವರ ಫೋಟೋ ವನ್ನು ಮಾರ್ಕ್ ಮಾಡಿ ಆಕ್ಷೇಪಾರ್ಹ ರೀತಿ ಚಿತ್ರಿಸಲಾಗಿದೆ ಮತ್ತೊಂದು ಕಾರ್ಯಕ್ರಮ ದಲ್ಲಿ ಗೊಂದಲ ಉಂಟು ಮಾಡುವ ರೀತಿ ಪೋಸ್ಟ್ ಮಾಡಲಾಗಿದೆ.
ಮೋದಿ ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣ ಮಾಡಲು ವಾಟ್ಸಪ್ ಗ್ರೂಪ್ ಮಾಡಲಾಗಿದೆ. ಸಾಮಾಜಿಕ ಜಾಲತಾಣವನ್ನು ಮಂಗಳೂರು ಸಿಟಿ ಸೈಬರ್ ಪೊಲೀಸರು ಮಾನಿಟರ್ ಮಾಡುತ್ತಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ಮಾಧ್ಯಮ ತಿಳಿಸಿದ್ದಾರೆ. ಈ ಬಗ್ಗೆ ಎರಡು ಪ್ರಕರಣ ದಾಖಲು.
ಸೈಬರ್ ಪೊಲೀಸರು ಮಾಟ ಮಾಡುತ್ತಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ಬಗ್ಗೆ ಎರಡು ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ಇಬ್ಬರು ಕೂಡ ನಾಪತ್ತೆಯಾಗಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಈ ಗ್ರೂಪ್ ಗಳನ್ನು ಸೋಷಿಯಲ್ ಮಿಡಿಯಾ ಸೆಲ್ ಮಾನಿಟರ್ ಮಾಡುತ್ತಿದೆ, ಈ ಪೋಸ್ಟ್ ಅಪರಾಧ ಅಂತಾ ಆದ್ರೆ ಪ್ರಕರಣ ದಾಖಲು ಮಾಡುತ್ತೇವೆ ,ಇಲ್ಲದಿದ್ದಲ್ಲಿ ಅವರಿಂದ ಲಕ್ಷ ರೂಪಾಯಿಯ ರಿಟಿ ಬಾಂಡ್ ಪಡೆಯಲಿದ್ದೇವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ, ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.