ಕೈಕಂಬ: ಸರಕಾರಿ ಪದವಿ ಪೂರ್ವ ಕಾಲೇಜು ಗುರುಪುರದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀ ಯಶವಂತ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಹೆಚ್ ದೈಹಿಕ ಶಿಕ್ಷಕರು ಹೋಲಿ ಫ್ಯಾಮಿಲಿ ಬಜ್ಪೆ ಇವರು ವಿದ್ಯಾರ್ಥಿಗಳಿಗೆ ನಾಯಕತ್ವದ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಸಮಾಜದ ಕಲ್ಪವೃಕ್ಷಗಳಾಗಬೇಕು ಯಾವ ರೀತಿ ಕಲ್ಪವೃಕ್ಷ ಎಲ್ಲವನ್ನು ಜನರಿಗೆ ಉಪಕಾರ ಮಾಡುತ್ತವೆ ಹಾಗೇ ನಿಮ್ಮಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಒಳ್ಳೆ ಕಣ್ಣುಗಳಾಗಿ ಮೂಡಿ ಬನ್ನಿ. ಕಾಲೇಜು ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿ ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಂಡು ದುಶ್ಚಟದಿಂದ ದೂರವಿರಿ ನೀವು ಸರಿಯಾಗಿ ಸಮಾಜವನ್ನು ಸರಿಪಡಿಸುವ ನಾಯಕರಾಗಿ ಜವಾಬ್ದಾರಿ ಹೊರಲು ಸದಾ ಸಿದ್ದರಾಗಬೇಕು ಒಳ್ಳೆಯ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಳ್ಳಿ ಎಂದರು.

ಶ್ರೀ ಚಂದ್ರಶೇಖರ ಪ್ರಾಂಶುಪಾಲರು ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕರಾದ ಶ್ರೀ ಕೇಶವ ಪೂಜಾರಿ ಅವರು ಪ್ರಮಾಣ ವಚನ ಬೋಧಿಸಿದರು. ಕಾಲೇಜು ನಾಯಕನಾದ ಚಿಂತನ್ ಶೆಟ್ಟಿಗಾರ್ ವಂದಿಸಿದರು. ಕೂಸಪ್ಪ ಮಾಸ್ತರ್, ನರಸಿಂಹ ಪೂಜಾರಿ, ಜಲಜ ಸಮಿತಿಯ ಸದಸ್ಯರು, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಬಾಬು,ಪ್ರಾಥಮಿಕ ಮುಖ್ಯ ಶಿಕ್ಷಕಿ ಜಯಶ್ರೀ ಮತ್ತು ಉಪನ್ಯಾಸಕರು ಉಪಸ್ಥಿತಿರಿದ್ದರು.ವಿದ್ಯಾರ್ಥಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *