ಶತಾಯುಷಿ ಸುಬ್ಬು ಪೂಜಾರ‍್ತಿ ನಿಧನ
ಬಂಟ್ವಾಳ: ರಾಯಿ ಗ್ರಾಮದ ಸೀತಾಳ ನಿವಾಸಿ ದಿವಂಗತ ಶೀನ ಪೂಜಾರಿ ಇವರ ಪತ್ನಿ ಶತಾಯುಷಿ ಸುಬ್ಬು ಪೂಜರ‍್ತಿ (೧೦೦) ಇವರು ಅಸೌಖ್ಯದಿಂದ ಜು.23ರಂದು ಶನಿವಾರ ರಾತ್ರಿ ನಿಧನರಾದರು.
ಮೃತರಿಗೆ ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ಕೃಷಿ ಚಟುವಟಿಕೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದ ಇವರ ಅಂತ್ಯಕ್ರಿಯೆ ಬಂಟ್ವಾಳ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಬೆಳಿಗ್ಗೆ ನೆರವೇರಿತು.