ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್
ನವದೆಹಲಿ: ಕೇವಲ ವಿಐಪಿ, ವಿಐಪಿಗಳಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಝೀರೋ ಟ್ರಾಫಿಕ್ ಮಾಡಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲಿ ಹುಲಿರಾಯ ರಸ್ತೆ ದಾಟಲು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಪ್ರಸಂಗವೊಂದು ನಡೆದಿದೆ.

ಇದು ಎಲ್ಲ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ವಾಹನವೊಂದರ ನಂಬರ್ ಪ್ಲೇಟ್ ಆಧರಿಸಿ ಹೇಳುವುದಾದರೆ ಇದು ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇದೆ. ಹುಲಿಗೆ ರಸ್ತೆ ದಾಟಲು ಅರಣ್ಯಾಧಿಕಾರಿಗಳಿಬ್ಬರು ಅನುವು ಮಾಡಿಕೊಟ್ಟಿದ್ದಾರೆ. ಹುಲಿ ರಸ್ತೆ ದಾಟುತ್ತಿರುವ ವೀಡಿಯೋವನ್ನು ವಾಹನಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಅದನ್ನು ಸೋಶಿಯಲ್ ಮಿಡಿಯಾಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಇಬ್ಬರು ಅರಣ್ಯಾಧಿಕಾರಿಗಳು ರಸ್ತೆ ಬದಿಯ್ಲಲಿ ಕಂಡು ಬಂದ ಹುಲಿಯನ್ನು ಆ ಕಡೆಯಿಂದ ಈ ಕಡೆಗೆ ದಾಟಲು ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿ ಹುಲಿರಾಯನನ್ನು ರಸ್ತೆ ದಾಟಿಸಿದ್ದಾರೆ. ಹುಲಿ ರಸ್ತೆ ದಾಟುವಾಗ ಜನ ಕಿರುಚಾಡಲು ಆರಂಭಿಸಿಸದ್ದಾರೆ. ಈ ವೇಳೆ ಅಧಿಕಾರಿಗಳು ಗದರಿದ್ದಾರೆ. ಅಲ್ಲದೆ ಹುಲಿಯನ್ನು ಹೋಗಲು ಬಿಡಿ ಎಂದು ಗರಂ ಆಗಿದ್ದಾರೆ. ಎರಡೂ ಕಡೆ ವಾಹನ ಹಾಗೂ ಜನ ನಿಂತಿದ್ದರೂ ಹುಲಿ ಮಾತ್ರ ರಾಜ ಗಾಂಭೀರ್ಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.