ಮೂಡಬಿದಿರೆ: ಯಕ್ಷಸಂಗಮ ಮೂಡಬಿದಿರೆ ಸಮಾಜಮಂದಿರ ಇದರ ಸಹಯೋಗದೊಂದಿಗೆ ೨೩ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸಂಮಾನ ಸಮಾರಂಭವು ಜು.೨೩ರಂದು ಶನಿವಾರ ರಾತ್ರಿ ೯.೦೦ಕ್ಕೆ ಸಮಾಜ ಮಂದಿರ, ಮೂಡುಬಿದಿರೆಯಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಅರ್ಥಧಾರಿ, ಛಾಂದಸರು ಹಾಗೂ ಪ್ರಸಂಗಕರ್ತ ತಾರನಾಥ ವರ್ಕಾಡಿ ಹಾಗೂ ತೆಂಕು ತಿಟ್ಟಿನ ಸುಪ್ರಸಿದ್ಧ ಅರ್ಥಧಾರಿ ಹಾಗೂ ದೇಷಧಾರಿಯಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಸಂಮಾನ ಕಾರ್ಯಕ್ರಮ ನಡೆಯಲಿರುವುದು.

ಸುಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು, ಯಕ್ಷಗಾನ ವಿಮರ್ಶಕರು ಹಾಗೂ ಚಿಂತಕರು ರಾತ್ರಿ ಗಂಟೆ ೧೦.೦೦ರಿಂದ ಸುಪ್ರಸಿದ್ಧ ಕಲಾವಿದರಿಂದ ದಮಯಂತಿ ಪುನಃ ಸ್ವಯಂವರ ರಾವಣ ವಧೆ ತಾಳಮದ್ದಳೆ ಕಾರ್ಯಕ್ರಮ ನಡೆಯಲಿರುವುದು

ಭಾಗವತರು: ಶ್ರೀಗಳಾದ ರವಿಚಂದ್ರ ಕನ್ನಡಿಕಟ್ಟೆ, ದೇವಿಪ್ರಸಾದ್ ಆಳ್ವ ತಲಪಾಡಿ, ಸಿದ್ಧಕಟ್ಟೆ ಭರತ್ ರಾಜ್ ಶೆಟ್ಟಿ

ಚೆಂಡೆ-ಮದ್ದಳೆ : ಶ್ರೀಗಳಾದ ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯಕೃಷ್ಣ ಪದ್ಯಾಣ, ಕೃಷ್ಣ ಪ್ರಕಾಶ್ ಉಳಿತ್ತಾಯ, ದೇವಾನಂದ ಭಟ್ ಮಿಜಾರು, ಶ್ರೀಧರ್ ವಿಟ್ಲ, ರಫೀಕುದ್ದೀನ್ ಮಡಂತ್ಯಾರು

ಚಕ್ರತಾಳ :ರಾಜೇಂದ್ರ ಕೃಷ್ಣ

ಅರ್ಥಧಾರಿಗಳು: ಡಾ| ಎಂ. ಪ್ರಭಾಕರ ಜೋಷಿ, ಶಂಭು ಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್, ತಾರನಾಥ ವರ್ಕಾಡಿ, ವಾಸುದೇವ ರಂಗಾ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ರವಿರಾಜ ಪನೆಯಾಲ, ಡಾ| ವಾದಿರಾಜ ಕಲ್ಲೂರಾಯ, ಕೆರೆಗದ್ದೆ ವೆಂಕಟರಮಣ ಭಟ್, ರಜನೀತ ಹೊಳ್ಳ ಕೆಂಪಿನಮಕ್ಕಿ, ಬಾಲಕೃಷ್ಣ ಭಟ್ ಪುತ್ತಿಗೆ

ಅಧ್ಯಕ್ಷರಾಗಿ ಯಕ್ಷಗಾನ ಪೋಷಕರು, ಲೇಖಕರು ಹಾಗೂ ಸಂಘಟಕರಾದ ಬಿ.ಭುಜಬಲಿ ಧರ್ಮಸ್ಥಳ, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಮಾಜಿ ಶಾಸಕ ಅಭಯಚಂದ್ರ ಜೈನ್, ಎಂ.ಎಂ.ಸಿ.ಎಸ್ ಬ್ಯಾಂಕ್ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ, ಯಕ್ಷಗಾನ ಪೋಷಕರು ಹಾಗೂ ಕಲಾವಿದರು ರಫೀಶುದ್ದೀನ್ ಮಡಂತ್ಯಾರು ಕುವೈಟ್ ಅಧಿಕಾರಿ, ಮೂಡುಬಿದಿರೆ, ಧನಲಕ್ಷ್ಮೀ ಸಮೂಹ ಸಂಸ್ಥೆ ಮಾಲಕರು ಕೆ.ಶ್ರೀಪತಿ ಭಟ್, ಯಕ್ಷಗಾನ ಪೋಷಕರು ಗೀತಾ ವಿಜಯ ಕಾಮತ್ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಯಕ್ಷಸಂಗಮ, ಮೂಡುಬಿದಿರೆ

By suddi9

Leave a Reply

Your email address will not be published. Required fields are marked *