ಮೂಡುಬಿದಿರೆ: ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ
ಮೂಡುಬಿದಿರೆ: ಮಳೆಯಿಂದ ಹಾನಿಗೊಳಗಾಗಿರುವ ಇರುವೈಲು ಗ್ರಾಮದ ಪಂಜ, ಹೊಸಬೆಟ್ಟು ಗ್ರಾಮದ ಶೇಡಿಗುರಿ, ಮೂಡುಬಿದಿರೆ ಕಡಲಕೆರೆ ಬಳಿಯ ರಸ್ತೆ ಹಾಗೂ ಕಡಂದಲೆಯ ಕಲ್ಲೋಳಿ, ನಲ್ಲೆಗುತ್ತು ಪ್ರದೇಶಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಸೋಮª ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇರುವೈಲು ಗ್ರಾಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯ ನಾಗೇಶ್, ಪ್ರದೀಪ್, ಮುಖಂಡ ಉಮೇಶ್ ಪೂಜಾರಿ ಪುಚ್ಚಮೊಗರು, ಪಾಲಡ್ಕ ಗ್ರಾಪಂ ಅಧ್ಯಕ್ಷ ದಿನೇಶ್ ಕಂಗ್ಲಾಯಿ, ಸದಸ್ಯ ರಂಜಿತ್ ಭಂಡಾರಿ, ತಾಪಂ ಮಾಜಿ ಸದಸ್ಯ ರಮೇಶ್ ಪೂಜಾರಿ, ಗ್ರಾಪಂ ಮಾಜಿ ಸದಸ್ಯ ಮೋಹನ್ ಶೆಟ್ಟಿ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮಕರಣಿಕ ಶ್ರೀನಿವಾಸ ಸಂದರ್ಭದಲ್ಲಿದ್ದರು.