ಅಪಘಾತದಲ್ಲಿ ಮೃತಪಟ್ಟ ಕನ್ಯಾನ ನಿವಾಸಿ ದಿ.ಧನಂಜಯ ನಾಯ್ಕ್ ಮನೆಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಕನ್ಯಾನ ನಿವಾಸಿ ದಿ.ಧನಂಜಯ ನಾಯ್ಕ್ ಮನೆಗೆ ಭೇಟಿ ನೀಡಿ, ಅಸೌಖ್ಯದಿಂದ ಮೃತಪಟ್ಟ ಕನ್ಯಾನ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿ.ರಾಮಣ್ಣ ಮೂಲ್ಯ ಹಾಗೂ ನಾಪತ್ತೆಯಾಗಿರುವ ಮುಂಡಪ್ಪ ಮುಗೇರರ ಮನೆಗಳಿಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ,ಡೊಂಬಯ ಅರಳ,ಕೆ.ಪಿ ರಘುರಾಮ ಶೆಟ್ಟಿ, ಪ್ರಮುಖರಾದ ಉದಾರಮಣ ಭಟ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಭಿಷೇಕ್ ರೈ,ರಮೇಶ್ ಮಕ್ಕುರಿ, ಅಣ್ಣು ನಾಯ್ಕ,ಕೃಷ್ಣ ಬನಾರಿ,ಪಂಚಾಯತ್ ಸದಸ್ಯರಾದ ಮನೋಜ್ ಬನಾರಿ,ನಾರಾಯಣ ಗೌಡ, ಮೋಹನ್ ದಾಸ್ ಶೆಟ್ಟಿ,ಭಾಸ್ಕರ, ಕಾರ್ತಿಕ್ ಬಲ್ಲಾಳ್, ಇರ್ವತ್ತೂರು ಪಂ.ಸದಸ್ಯರಾದ ಶುಭಕರ ಶೆಟ್ಟಿ,ಎಸ್.ಟಿ ಮೋರ್ಚಾ ಕಾರ್ಯದರ್ಶಿ ಯಶವಂತ ನಗ್ರಿ,ಚಂದ್ರಶೇಖರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

