ಎಳ್ಳಾರೆ: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸ.ಕಿ. ಪ್ರಾಥಮಿಕ ಶಾಲೆ ಮುಳ್ಕಾಡು ಇಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವಿಸ್ತರಣಾಧಿಕಾರಿಯಾದ ಶ್ರೀ ವಿನಯ್ ಕುಮಾರ್ ಮಾತನಾಡಿ ಲವಣ ಮಿಶ್ರಣಗಳ ಬಳಕೆ,ಹಾಲಿನ ಗುಣಮಟ್ಟ ಹೆಚ್ಚಿಸುವ ಬಗ್ಗೆ ಹಾಗೂ ಒಕ್ಕೂಟದಿಂದ ಸಿಗುವ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಳ್ಳಾರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಿ ಪ್ರಭು, ಉಪಾಧ್ಯಕ್ಷರಾದ ಸತ್ಯಭಾಮಾ ಜೋಯಿಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತಿ, ನಿರ್ದೇಶಕರಾದ ಆಶಾ ಪ್ರಭು, ದಿವ್ಯಾ ಕಾಮತ್, ಸಂಗೀತಾ, ಶ್ರೀಮತಿ ಮಂಜುಳ, ಸುನೀತಾ, ರೇಷ್ಮಾ ಪ್ರಭು, ಪದ್ಮಶ್ರೀ, ಮಮತಾ ಉಪಸ್ಥಿತರಿದ್ದರು. ಆಶಾ ಪ್ರಭು ಸ್ವಾಗತಿಸಿದರು. ಕಾಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
