ಮುಂಬಯಿ: ಜೈನ ಕಾಶಿಯ ಇತಿಹಾಸ ಪ್ರಸಿದ್ಧ್ದ ಮೂಡುಬಿದಿರೆ ಕೆರೆ ಬಸದಿಯಲ್ಲಿ ಜು.19ರಂದು ಮಂಗಳವಾರ ೧೨ನೇ ತೀರ್ಥಂಕರ ಭಗವಾನ್ ವಾಸುಪೂಜ್ಯ ಸ್ವಾಮಿ ಗರ್ಭವಾ ತರಣ ಕಲ್ಯಾಣ ಪೂಜೆ ಹಾಗೂ ಭಗವಾನ್ ಮಲ್ಲಿನಾಥ ಸ್ವಾಮಿ ಕ್ಷೀರ ಅಭಿಷೇಕ, ವಾಸ್ತು, ತಿಥಿüಗ್ರಹ, ಕ್ಷೇತ್ರಪಾಲ, ನಾಗ ದೇವರ ಪೂಜೆ ನೆರವೇರಿಸಲಾಯಿತು.

ಜಿನ ಪೂಜಾ ಪದ್ಧತಿಯಂತೆ ಗಂಗಾದಿ ಹದಿನಾಲ್ಕು ಪವಿತ್ರ ನದಿಗಳ ಮಂತ್ರ ಪಠಿಸಿ ಕಲಶದಲ್ಲಿ ಪುಣ್ಯಾಹ ವಾಚನ ಮಾಡಿ ಸ್ಥಾಪಿಸಿದ ಕಲಶ ದಿಂದ ಶಾಂತಿ ಮಂತ್ರ ಪಠಿಸಿ ಬಸದಿ ಕೆರೆಗೆ ಪವಿತ್ರ ಜಲ ಸೇಚನ ಮಾಡಿ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅನುಗ್ರಹಿಸಿ ನಾಡಿನಲ್ಲಿ ಎಲ್ಲೊ ಕೂಡ ಅತೀ ವೃಷ್ಟಿ ಅಥವಾ ಅನಾವೃಷ್ಟಿ ಆಗದಿರಲಿ ಲೋಕದಲ್ಲಿ ಶಾಂತಿ ನೆಲೆಯಾಗಲಿ ಎಂದು ಪ್ರಾರ್ಥಿಸಿದರು.

ಕೆರೆ ಬಸದಿ ಹೋರಾಂಗಣದಲ್ಲಿ ಭಗವಾನ್ ಶ್ರೀ ವಾಸುಪೂಜ್ಯಸ್ವಾಮಿಗೆ ಸ್ವಾಮೀಜಿ ಮಹಾ ಅರ್ಗ್ಯ ನೀಡಿ ಬಸದಿ ಕೆರೆಗೆ ಬಾಗಿನ ಅರ್ಪಿಸಲಾಯಿತು. ಅರ್ಚಕ ಶ್ರೀ ಸುವಿದಿ ಇಂದ್ರ ಇವರು ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪೂಜೆ ನೆರವೇರಿಸಿದರು.

ಈ ಸಂಧರ್ಭ ಪಟ್ಟಣ ಶೆಟ್ಟಿ ಸುಧೀಶ್ ಕುಮಾರ್, ದಿನೇಶ್ ಬೆಟ್‌ಕೇರಿ, ಆದರ್ಶ್ ಅರಮನೆ, ಅಭಯ ಕುಮಾರ್, ಸಂಜಯAಥ ಕುಮಾರ್ ಸುಧಾಕರ್, ಸರ್ವ ಮಂಗಳ ಮಹಿಳಾ ಸಂಘದ ನೂತನ ಅಧ್ಯಕ್ಷೆ ಸುಧಾ ಪಾರ್ಶ್ವನಾಥ್, ಶ್ವೇತಾ ಜೈನ್, ನೇರಂಕಿ ಪಾರ್ಶ್ವನಾಥ್ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *