ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ರಾಜ್ಯಾಧ್ಯಕ್ಷರಾಗಿ ಲೋಕೇಶ ಶೆಟ್ಟಿ ಆಯ್ಕೆ
ಬಂಟ್ವಾಳ: ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ರಾಜ್ಯಾಧ್ಯಕ್ಷರಾಗಿ ಬಂಟ್ವಾಳ ಎಲ್ಲೈಸಿ ಶಾಖೆಯ ಬೆಳ್ತಂಗಡಿ ಉಪಶಾಖೆ ಹಿರಿಯ ಪ್ರತಿನಿಧಿ ಲೋಕೇಶ ಶೆಟ್ಟಿ ಧರ್ಮಸ್ಥಳ ಇವರು ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಎಸ್ ಡಿ ಎಂ ಸಭಾಂಗಣದಲ್ಲಿ ಈಚೆಗೆ ನಡೆದ ೬ನೇ ರಾಜ್ಯ ಸಮ್ಮೇಳನದಲ್ಲಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದೇ ವೇಳೆ ರಾಜ್ಯ ಸಮಿತಿಗೆ ಕರುಣಾಕರ ನಾಯಕ್, ವಿನ್ಸೆಂಟ್ ಡಿಸೋಜ, ಜಗದೀಶ್ ಜೈನ್ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.