ಸುದ್ದಿ9ಮೂಡುಬಿದರೆ: ಜಾಗದ ತಕರಾರು ವಿಕೋಪಕ್ಕೆ ಹೋಗಿ ನಾಲ್ಕು ಮಂದಿಯ ತಂಡವೊಂದು ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಇರುವೈಲಿನಲ್ಲಿ ಭಾನುವಾರ ಸಂಭವಿಸಿದೆ.
ಹಲ್ಲೆಗೊಳಗಾದ ಮಹಿಳೆ ಇರುವೈಲಿನ ಚಂದ್ರಹಾಸ ಪೂಜಾರಿ ಎಂಬವರ ಪತ್ನಿ ಪ್ರಭಾವತಿ ಎಂದು ತಿಳಿದುಬಂದಿದೆ. ಜಾಗದ ಹಕ್ಕಿನ ಬಗ್ಗೆ ನೆರಕರೆಯ ಮಧ್ಯೆ ಹಲವು ಸಮಯಗಳಿಂದ ವಿವಾದವಿತ್ತೆನ್ನಲಾಗಿದೆ. ಭಾನುವಾರ ಪ್ರಕರಣ ವಿಕೋಪಕ್ಕೆ ಹೋಗಿ ನೆರೆಮನೆಯ ಸುಂದರ ಪಪೂಜಾರಿ, ಸುಜಾತ, ಮತ್ತು ಇತರ ಇಬ್ಬರು ಸೇರಿ ಪ್ರಭಾವತಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆ ಮೂಡುಬಿದರೆ ಸಕರ್ಾರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮೂಡುಬಿದರೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
