ಸುದ್ದಿ9ಮೂಡುಬಿದಿರೆ : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದರೂ ತುಳು ರಾಜಾಶ್ರಯವಿಲ್ಲದೇ ಹಿಂದಿನಿಂದಲೂ ಸೊರಗುತ್ತಾ ಬಂದಿದೆ. ಆದರೆ ಕನ್ನಡ,ತೆಲುಗು, ತಮಿಳು, ಮಲೆಯಾಳ ಭಾಷೆಗಳು ಪ್ರತ್ಯೇಕ ರಾಜ್ಯಗಳ ಭಾಷೆಯಾಗಿ ಬೆಳೆದಿವೆ. ಇನ್ನೊಂದೆಡೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ತುಳು ಭಾಷೆಗೆ ಕನಿಷ್ಠ ಸವಿಂಧಾನದ 8 ನೇ ಪರಿಚ್ಛೇದಕ್ಕೂ ಸೇರುವ ಭಾಗ್ಯವಿಲ್ಲದಂತಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಅವರು ರವಿವಾರ ಸಮಾಜ ಮಂದಿರದಲ್ಲಿ ತುಳುಕೂಟ (ರಿ) ಮೂಡುಬಿದಿರೆ ಇದರ ಬೆಳ್ಳಿ ಹಬ್ಬದ ಅಂಗವಾಗಿ ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದಲ್ಲಿ “ತುಳು ಐಸಿರಿ-2014″ ಎಂಬ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಲಿಯೇಂದ್ರನಿಗೆ ದೀಪ ಬೆಳಗಿಸಿ ಕರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತುಳು 30ಕ್ಕೂ ಹೆಚ್ಚು ಸಮುದಾಯದ ಆಡು ಭಾಷೆಯಾಗಿದೆ. ಆದರೆ ಲಿಪಿ ಇದ್ದರೂ ಜನಾನುರಾಗಿಯಾಗಿಲ್ಲ. ಆದರೆ ತುಳು ಅಕಾಡೆಮಿಯಂತಹ ಸಂಘಟನೆಗಳಿಂದಾಗಿ ಭಾಷೆಗೆ ಸೊಬಗು ಬಂದಿದೆ. ಡಾ.ಹೆಗ್ಗಡೆಯವರ ವಿಶ್ವ ತುಳು ಸಮ್ಮೇಳನದಂತಹ ಮಹೋತ್ಸವಗಳಿಂದಾಗಿ ಜೀವನ ಪದ್ಧತಿಯ ಮೇಲೆ ಜಾಗತಿಕ ದಾಳಿಯ ನಡುವೆಯೂ ತುಳು ಬೆಳೆಯುತ್ತಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಮಾತನಾಡಿ ತುಳು ಸಾಹಿತ್ಯ ಬೆಳೆಯುತ್ತಿದ್ದರೂ ಅದು ಪುಸ್ತಕಗಳಿಗೆ ಸೀಮಿತವಾಗದೇ ತುಳು ಜನಸಾಮಾನ್ಯರಿಗೆ ಮುಟ್ಟುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ.ಎಂ. ಬ್ರಹ್ಮಾವರ ಅವರು ಮಾತನಾಡಿ ತುಳು ಅಕಾಡೆಮಿಯು ಅಕಾಡೆಮಿಕ್ ವಿಷಯಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಸಂಸ್ಕೃತಿಯನ್ನು, ಪ್ರತಿಭೆಯನ್ನು ಬೆಳಗಿಸುವ ಕೆಲಸದಲ್ಲಿ ಆಸಕ್ತಿ ಹೊಂದಿದೆ ಎಂದರು.
ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಸಾಂಗ್ಲಿ ಮತ್ತು ಉಡಲ್ ತುಳು ಪತ್ರಿಕೆಯ ಸಂಪಾದಕಿ ಜಯಂತಿ.ಎಸ್. ಬಂಗೇರಾ , ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್ , ಕಾಯರ್ಾಧ್ಯಕ್ಷ ಚಂದ್ರಹಾಸ ದೇವಾಡಿಗ, ಅವರನ್ನು ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಉಗ್ಗಪ್ಪ ಪೂಜಾರಿಯವರ ಪಾರ್ದನ ಪದೊಕುಲು ಕೃತಿ ಬಿಡುಗಡೆ ನಡೆಯಿತು.
ಕಾರ್ಯಕ್ರಮದಲ್ಲಿ ಎರಡು ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು ಉದ್ಯಮಿ ಕೆ.ಶ್ರೀಪತಿ.ಭಟ್ ಅಧ್ಯಕ್ಷತೆಯಲ್ಲಿ ಮಂಗಳೂರು ವಿವಿಯ ಉಪನ್ಯಾಸಕಿ ಡಾ.ರಾಜಶ್ರೀ ಅವರಿಂದ ” ನಾಲಾಯಿರ್ದ್ ನಾಲೂರುಗು” ಮತ್ತು ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ಡಾ.ಕಿಶೋರ್ ಕುಮಾರ್ ರೈ ಶ್ರೇಣಿ ಅವರಿಂದ ” ತುಳು ಜಾನಪದ ನಡವಳಿಲು” ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಯರ್ಾಧ್ಯಕ್ಷ ಚಂದ್ರಹಾಸ ದೇವಾಡಿಗ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಚಂದ್ರ ಕೊಪ್ಪ ಮತ್ತು ತಂಡದಿಂದ ತುಳು ಸುಮಧುರ ಹಾಡುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಜಯಶೀಲ, ಮೋಹನ್ ಕೊಪ್ಪಳ, ತುಳುಕೂಟದ ಉಪಾಧ್ಯಕ್ಷ ಧನಕೀತರ್ಿ ಬಲಿಪ, ಗೌರವ ಪೋಷಕ ಎಂ.ಬಾಹುಬಲಿ ಪ್ರಸಾದ್ ಮತ್ತು ಕೋಶಾಧಿಕಾರಿ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.
ದಿನ ಪೂತರ್ಿ ನಡೆದ “ತುಳು ಐಸಿರಿ-2014″ಯಲ್ಲಿ ಕವಿಗೋಷ್ಠಿ, ನವೀನ್ ಚಂದ್ರ ಕೊಪ್ಪ ಮತ್ತು ತಂಡದಿಂದ ತುಳು ಕವಿತೆಗಳು ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಎಕ್ಸಲೆಂಟ್ ಪಿ.ಯು.ಕಾಲೇಜು, ಮಹಾವೀರ ಕಾಲೇಜಿನ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪೂರಾಪೊಕ್ಕಡೆ ಎಂಬ ಸಾಂಸರಿಕ ತುಳುಚಿತ್ರ ಪ್ರದರ್ಶನಗೊಂಡಿತು.



