ಸುದ್ದಿ9ಮೂಡುಬಿದರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯಕ್ಷ ಕಲೋತ್ಸವ-2014 ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ಭಾನುವಾರ ಸಂಜೆ ಸಂಪನ್ನಗೊಂಡಿತು.
ಪ್ರಸಕ್ತ ವರ್ಷದ ಯಕ್ಷದೇವ ಪ್ರಶಸ್ತಿಯನ್ನು ಹಿರಿಯ ಹಿಮ್ಮೇಳಗಾರರಾದ ಹರಿನಾರಾಯಣ ಬೈಪಾಡಿತ್ತಾಯ, ಮಹಾಬಲ ಶೆಟ್ಟಿ ಪಟ್ಲಗುತ್ತು ಅವರಿಗೆ ನೀಡಿ ಗೌರವಿಸಲಾಯಿತು.
ಕನರ್ಾಟಕ ಬಯಲಾಟ ಅಕಾಡೆಮಿಯ ಸದಸ್ಯ ಅಂಬಾತನಯ ಮುದ್ರಾಡಿ ಶುಭಾಶಂಸನೆ ಗೈಯುತ್ತಾ, ಕಲೆಗಿಂತ ಕಲಾವಿದ ದೊಡ್ಡವನಲ್ಲ.ಆದರೆ ಯಾವುದೇ ಕಲಾವಿದನ್ನೂ ವಿಮಶರ್ೆ ಒಡ್ಡಿಕೊಳ್ಳಲು ಸಿದ್ದನಿಲ್ಲ.ಇದು ಕಲೆಯ ದುರಂತ. ಯಕ್ಷದೇವ ಮಿತ್ರಕಲಾಮಂಡಳಿ ಇಲ್ಲಿಯವರೆಗೆ ಹುಡುಗಾಟ ನಡೆಸಿದ್ದಿರಿರಬಹುದು ಇನ್ನು ಮುಂದೆ ಹುಡುಕಾಟ ನಡೆಯಲಿ ಎಂದರು.
ಬಲ್ಲಿರೇನಯ್ಯ ಯಕ್ಷಗಾನ ಪತ್ರಿಕೆ ಸಂಪಾದಕ ತಾರಾನಾಥ ವಕರ್ಾಡಿ ಯಕ್ಷಕಲೋತ್ಸವ-2014ರ ಅವಲೋಕನ ಮಾಡುತ್ತಾ, ಇಂತಹ ಕಾರ್ಯಕ್ರಮಗಳು ಕಲಾವಿದರ ಯೋಗ್ಯತೆ ತಿಳಿಯಲು, ಕಲಾಭಿಮಾನಿಗಳ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರು ಅಧ್ಯಕ್ಷತೆ ವಹಿಸಿ, ಕರಾವಳಿಗರು ಬುದ್ಧಿವಂತರು, ಅಂಜಿಕೆಯಿಲ್ಲದವರು, ಆತ್ಮವಿಶ್ವಾಸ ಉಳ್ಳವರು ಎಂಬುದಕ್ಕೆ ಹಿನ್ನಲೆಯಾಗಿ ಯಕ್ಷಗಾನ ಇದೆ ಎಂಬುವುದನ್ನು ಮರೆಯಲಾಗದು ಎಂದರು.
ಪೂನ ಹೈಕೋಟರ್್ ವಕೀಲ ಐ.ಸಿ.ಶೆಟ್ಟಿ ಇರುವೈಲು, ಯಕ್ಷದೇವ ಮಿತ್ರಕಲಾ ಮಂಡಳಿ ಗೌರವಾಧ್ಯಕ್ಷ ಶ್ರೀಪತಿ ಭಟ್, ಕಾಯರ್ಾಧ್ಯಕ್ಷ ಎಂ.ದೇವಾನಂದ ಭಟ್ ಉಪಸ್ಥಿತರಿದ್ದರು. ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮುಂಚೆ ಯಕ್ಷದೇವ ಮಿತ್ರ ಕಲಾ ಮಕ್ಕಳ ಮೇಳದಿಂದ ಮಹಿಷ ವಧೆ, ಸಭಾ ಕಾರ್ಯಕ್ರದ ಬಳಿಕ ಭಕ್ತ ಸುಧನ್ವ ತೆಂಕು ಬಡಗು ಕೂಡಾಟ ನಡೆಯಿತು.

