ಸುದ್ದಿ9ಮೂಡುಬಿದರೆ: ನಿಮರ್ಾಣ ಹಂತದಲ್ಲಿರುವ ಕಟ್ಟಡಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು 1ಲಕ್ಷ ರೂ ಮೌಲ್ಯದ ವಸ್ತುಗಳ ಸಹಿತ ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೂಲತ: ಕುಪ್ಪೆಪದವು ಬೊಳಿಯಾರ್ನ ಹರೀಶ್ ಪೂಜಾರಿ (35) ಆರೋಪಿ. ದೇವಿ ಕೃಪಾ ಬಿಲ್ಡರ್ಸ್ ಮೇಲ್ವೀಚಾರಣೆಯಲ್ಲಿ ಮಾಸ್ತಿಕಟ್ಟೆಯಲ್ಲಿ ನಿಮರ್ಾಣ ಹಂತದಲ್ಲಿರುವ ಕಟ್ಟಡದ ಶೆಡ್ನಿಂದ 24000 ಮೌಲ್ಯದ ಮತ್ತು ನಾಗರಕಟ್ಟೆಯ ಶೆಟ್ಟಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ನಿಮರ್ಾಣ ಹಂತದಲ್ಲಿರುವ ಕಟ್ಟಡದ ಶೆಡ್ನಲ್ಲಿ ಇರಿಸಲಾಗಿದ್ದ ಸುಮಾರು 15000 ಮೌಲ್ಯದ ಕಬ್ಬಿಣದ ರಾಡ್ಗಳನ್ನು ದೀಪಾವಳಿಯ ರಜೆಯ ಸಂದರ್ಭದಲ್ಲಿ ಕಳ್ಳತನ ನಡೆಸಿದ್ದನು. ಅಲ್ಲದೆ ಮಂಗಳೂರಿನ ಕೇಶವ ಎಂಬವರಿಗೆ ಸೇರಿರುವ ಹೀರೊ ಮೆಸ್ಟ್ರೋ ಕೆಎ-19 ಇಕೆ 225ನ್ನು ಒಟ್ಟು 1ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ ನಡೆಸಿದ್ದನು.
ಕಳ್ಳತನ ಆಗಿರುವ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಗೆ ಸುದೀರ್ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಕಾರ್ಯಪ್ರವೃತರಾದ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಕರಿಂಜೆ ಗ್ರಾಮದ ಬಿರಾವು ಎಂಬಲ್ಲಿ ಪುಚ್ಚಮೊಗರುವಿನಿಂದ ಮೂಡುಬಿದರೆಗೆ ಹೀರೋ ಮೆಸ್ಟ್ರೋವಿನಲ್ಲಿ ಬರುತ್ತಿದ್ದು ಪೊಲೀಸರನ್ನು ನೋಡಿ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಲು ಪ್ರಯತ್ನಿಸಿದಾಗ ಸಂಶಯಗೊಂಡ ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದು ವಿಚಾರಿಸಿದಾಗ ಸತ್ಯ ವಿಚಾರ ಬಾಯಿ ಬಿಟ್ಟಿದ್ದಾನೆ.
ಆರೋಪಿ ಹರೀಶ್ ಶಾಂತಿರಾಜ ಕಾಲೋನಿಯಲ್ಲಿರುವ ತನ್ನ ಪತ್ನಿಯ ಮನೆಯಲ್ಲಿ ವಾಸಿಸುತ್ತಿದ್ದು ಸೆಂಟ್ರಿಂಗ್ ಕೆಲಸವನ್ನು ಮತ್ತು ನಂದಿನಿ ಹಾಲಿನ ಲೈನ್ಗೆ ಹಾಕುವ ಕೆಲಸವನ್ನು ಮಾಡುತ್ತಿದ್ದನು. ಈ ಹಿಂದೆ ಈತನ ವಿರುದ್ಧ ಕದ್ರಿ ಠಾಣೆ ಸರಹದ್ದಿನಲ್ಲಿ 4 ಕಳವು ಪ್ರಕರಣ, ಮೂಲ್ಕಿಯಲ್ಲಿ ತನ್ನ ಚಿಕ್ಕಮ್ಮನ ಮನೆಯಿಂದ ಬಂಗಾರದ ಆಭರಣ ಮತ್ತು ಎಲೆಕ್ಟ್ರಿಕಲ್ಸ್ ವಸ್ತುಗಳನ್ನು ಕದ್ದರಿರುವ ಬಗ್ಗೆ ಹಾಗೂ ಮಂಗಳೂರು ಉತ್ತರ ಬಂಟ್ವಾಳ ನಗರದಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.
ಮೂಡುಬಿದರೆ ಪೊಲೀಸ್ ಉಪನಿರೀಕ್ಷಕ ರಮೇಶ್ ಕುಮಾರ್, ಕ್ರೈಂ ವಿಭಾಗದ ಐತಪ್ಪ, ಸಂತೋಷ್.ಬಿ.ಕೆ, ಮಹಮ್ಮದ್ ಹುಸೇನ್, ಚಂದ್ರಹಾಸ ರೈ, ವಾಸು ಮತ್ತು ಸಿಬಂದಿಗಳಾದ ಮೇಘರಾಜ, ಸುರೇಂದ್ರ, ಇಕ್ಬಾಲ್, ಮೋಹನ್, ಆಶಿತ್, ಹೋಗಾಡರ್್ ವಿನೋದ್ ಆರೋಪಿಯನ್ನು ಹಿಡಿಯುವಲ್ಲಿ ಸಹಕರಿಸಿದ್ದರು.



