ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ನೇತಾಜಿ ಕಲ್ಲಡ್ಕ ಶಾಖೆ ವತಿಯಿಂದ ಜು.19ರಂದು ಮಂಗಳವಾರ ನಡೆದ ಮಾತೃವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ.ಕಮಲಾ ಪ್ರಭಾಕರ ಭಟ್ ಮಾರ್ಗದರ್ಶನ ನೀಡಿದರು. ಶಿಕ್ಷಕ ದಿನೇಶ್ ರಾಮನಗರ, ಲಕ್ಷ್ಮೀನಾರಾಯಣ, ಮುಖ್ಯಶಿಕ್ಷಕ ಮನೋಜ್ ಉಳ್ಳಾಲ, ನಾಗೇಶ ಕಲ್ಲಡ್ಕ ಮತ್ತಿತರರು ಇದ್ದರು.

