ಕಟ್ಟಡ ವೆಲ್ಡಿಂಗ್ ಕೆಲಸಮಾಡುತ್ತಿದ್ದಾಗ ಮೂರನೇಮಹಡಿಯಿಂದ ಆಯಾತಪ್ಪಿ ಬಿದ್ದು ಅಮ್ಮುಜೆಯ ಯುವಕ ಮೃತ
ಕೈಕಂಬ : ಕಟ್ಟಡ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಆಯಾ ತಪ್ಪಿ ಬಿದ್ದು ಯುವಕ ಮೃತ ಪಟ್ಟ ಘಟನೆ ಜು.19ರಂದು ಮಂಗಳವಾರ ಬೆಳಿಗ್ಗೆ ಮಂಗಳೂರಿನ ಬಿಜೈಯಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಾಣಿಯೂರು ನಿವಾಸಿ ಅಶೋಕ್ (ದೀಪಕ್)ಎಂದು ತಿಳಿದು ಬಂದಿದೆ.