ಬಂಟ್ವಾಳ: ಅಧಿಕಾರದ ಆಸೆಗಾಗಿ ಬಂಟ್ವಾಳ PLD ಬ್ಯಾಂಕ್ ನ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸುದರ್ಶನ್ ಜೈನ್ ಬೀದಿಯಲ್ಲಿ ಪ್ರತಿಭಟನೆ ಹೆಸರಿನಲ್ಲಿ ನಾಟಕವಾಡುವ ಬದಲು ಬಡವನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಸರಕಾರಿ ಭೂಮಿ ಕಬಳಿಕೆ ಪ್ರಕರಣ ಕಾನೂನುಬದ್ಧವಾಗಿದ್ದರೇ ನ್ಯಾಯಕ್ಕಾಗಿ ಕೋರ್ಟ್ ನಲ್ಲಿ ಯಾಕೆ ಪ್ರಶ್ನಿಸಲಿಲ್ಲ – ಸಂಜೀವ ಪೂಜಾರಿ ಪಿಲಿಂಗಾಲು ಅಧ್ಯಕ್ಷರು ಪಂಜಿಕಲ್ಲು ಗ್ರಾಮ ಪಂಚಾಯತ್
ಬಡವರ ಮನೆಯ ಗೇಟಿಗೆ ಬೀಗ ಹಾಕುವ ಕೆಲಸ ಗ್ರಾಮ ಪಂಚಾಯತ್ ಮಾಡಿಲ್ಲ, ಗ್ರಾಮ ಪಂಚಾಯತ್ ಗೆ ಸೇರಿದ ಜಾಗಕ್ಕೆ ಪಂಚಾಯತ್ ಬೀಗ ಹಾಕಿದ್ದು, ಮಾಹಿತಿ ಕೊರತೆಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಸಂಜೀವ ಪೂಜಾರಿ ಅವರು ಹೇಳಿದರು.
ಅವರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಸರಕಾರದ 10 ಸೆಂಟ್ಸ್ ಜಾಗವನ್ನು ಕಬಳಿಸಲು ಯತ್ನಿಸುವುದಕ್ಕೆ, ಕಾಂಗ್ರೆಸ್ ಸಹಕಾರ ನೀಡುವುದು ಸರಿಯಾ?
ಪಿ.ಎಲ್.ಡಿ.ಬ್ಯಾಂಕ್ ಚುನಾವಣಾ ವಿಚಾರದಲ್ಲಿ ಹೈಕೋರ್ಟ್ ಗೆ ಹೋಗಿರುವ ಸುದರ್ಶನ್ ಜೈನ್ ಅವರು ಬಡವರನ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಗೇಟಿನ ಬೀಗದ ವಿಚಾರದಲ್ಲಿ ಹೈಕೋರ್ಟ್ ಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಸವಾಲು ಎಸೆದರು.
ಪಂಚಾಯತ್ ಭ್ರಷ್ಟಾಚಾರ ದ ವಿಚಾರದಲ್ಲಿ ಇವರಲ್ಲಿ ಸಾಕ್ಷ್ಯಗಳಿದ್ದರೆ ತೋರಿಸಲಿ,ಕೇವಲ ರಾಜಕೀಯ ದುರುದ್ದೇಶದಿಂದ ಮಾತನಾಡುವುದು ಶೋಭೆಯಲ್ಲ.
ಪ್ರತಿ ಚುನಾವಣಾ ಸಂದರ್ಭದಲ್ಲಿ ಗೂಂಡಗಿರಿ ಮಾಡುವುದು ಇವರ ಕೆಲಸವಾಗಿ ದ್ದು, ಪ್ರಸ್ತುತ ಇವರ ಗೂಂಡಾಗಿರಿಗೆ ಬಿಜೆಪಿ ಕಾರ್ಯಕರ್ತರು ಪ್ರತ್ಯುತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಂಜಿಕಲ್ಲುವಿನಲ್ಲಿ ಇನ್ನಷ್ಟು ಬಲಯುತವಾಗಿ ಉತ್ತಮ ಆಡಳಿತ ನೀಡುತ್ತೇವೆ.
ಪಂಜಿಕಲ್ಲಿ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರ , ಅವ್ಯವಹಾರದ ಪರಮಾವಧಿ ಯಿಂದ ಅ ಬಳಿಕ ಕಾಂಗ್ರೆಸ್ ನ್ನು ತಿರಸ್ಕಾರ ಮಾಡಿದೆ ಎಂಬುದಕ್ಕೆ ಸತತವಾಗಿ ಪಂಜಿಕಲ್ಲು ವಿನಲ್ಲಿ ಬಿಜೆಪಿ ಆಡಳಿತ ಮಾಡುವುದೇ ಸಾಕ್ಷಿಯಾಗಿದೆ ಎಂದರು.
ಕಾಂಗ್ರೇಸ್ ಪಕ್ಷದ ವತಿಯಿಂದ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ ಜೊತೆಗೆ ಹಿಂದೆ ಆಗಿರುವ ಅಭಿವೃದ್ಧಿ ಯೋಜನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಇವರ ಆರೋಪಗಳಿಗೆ ದಾಖಲೆ ತೋರಿಸಲಿ , ಪ್ರತಿಭಟನೆಯಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಕಾಂಗ್ರೆಸ್ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಗ್ರಾ.ಪಂ.ಯಾವ ಸದಸ್ಯರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಅವರು ತಿಳಿಸಿದರು. ಗ್ರಾ.ಪಂ.ಹಿಂಬದಿ ಬಾಗಿಲಿನಲ್ಲಿ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಪ್ರತಿಭಟನೆ ಯಲ್ಲಿ ಗ್ರಾಮದ ಜನತೆ ಯಾಕೆ ಭಾಗವಹಿಸಿಲ್ಲ ಎಂಬುದನ್ನು ಇವರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇವರಿಗೆ ಎದುರಾಗಿದೆ ಎಂದು ಅವರು ಹೇಳಿದರು.
ಮುಕುಡದಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ವೃಥಾ ಆರೋಪದ ಮೂಲಕ ರಾಜಕೀಯ ಮಾಡುತ್ತಿರುವುದು ಸರಿಯಲ್ಲ.
ವಿರೋಧ ಪಕ್ಷದ ಸದಸ್ಯರನ್ನು ಗೌರವಯುತವಾಗಿ ನೋಡಿಕೊಂಡಿದ್ದೇವೆ ಮುಂದೆಯೂ ಅಭಿವೃದ್ಧಿ ಹಾಗೂ ಪಂಚಾಯತ್ ನ ವ್ಯವಸ್ಥೆ ಯಡಿಯಲ್ಲಿ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಯಶ್ರೀ,ಸದಸ್ಯರಾದ ಮೋಹನ್ ದಾಸ, ಲಕ್ಮೀನಾರಾಯಣ ಗೌಡ, ಬಾಲಕೃಷ್ಣ ಪೂಜಾರಿ, ನಳಿನಿಪ್ರಸಾದ್, ವಿಕೇಶ್, ಹರೀಶ್ ಪೂಜಾರಿ, ಪೂವಪ್ಪ ಮೆಂಡನ್, ಗೋಪಾಲ ಕುಲಾಲ್, ರೂಪ ಶ್ರೀ, ಚಿತ್ರಾಕ್ಷಿ, ಚಂದ್ರಾವತಿ, ಶೋಭ, ಉಪಸ್ಥಿತರಿದ್ದರು.
