ಬೆಳಗಾವಿ: ಮೊದಲು ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಗೆ ಕೊಡುವಂತಹ ಮರ್ಯಾದೆ ಕೊಡಲಿ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ ಟಾಂಗ್ ಕೊಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಕ್ಕೆ ನಾನೂ ಉತ್ತರ ಕೊಡಲಿಕ್ಕೆ ಆಗಲ್ಲ. ಅವರ ಮನೆಯನ್ನ ಮೊದಲು ಸರಿ ಮಾಡಿಕೊಳ್ಳಲಿ. ಮೊದಲು ಯಡಿಯೂರಪ್ಪ ಸಾಹೇಬರಿಗೆ ಕೊಡುವಂತಹ ಮರ್ಯಾದೆ ಕೊಡಲಿ ಎಂದು ಟೀಕಿಸಿದರು.

ದಕ್ಷಿಣ ಭಾರತ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬರಲಿಕ್ಕೆ ಯಡಿಯೂರಪ್ಪ ಸಾಹೇಬ್ರು ಕಾರಣರಾಗಿದ್ದಾರೆ. ಮೊದಲು ಅವರಿಗೆ ಕೊಡುವಂತಹ ಗೌರವ ಸ್ಥಾನಮಾನ ಕೊಡಲಿ. ಮೊದಲು ಅವರ ಎಡೆಯಲ್ಲಿ ಬಿದ್ದಿರೋದನ್ನ ತಗೆದು ಸುಧಾರಿಸಿಕೊಳ್ಳಲಿ. ಆಮೇಲೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿ ಎಂದು ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದರು.

ಸಿದ್ದರಾಮೋತ್ಸವ ಅವರ ಹುಟ್ಟುಹಬ್ಬವನ್ನು ಎಲ್ಲರೂ ಕೂಡ ತುಂಬು ಮನಸ್ಸಿನಿಂದ ಮಾಡ್ತಾ ಇದ್ದೇವೆ. ರಾಜಕೀಯದಲ್ಲಿ 40 ವರ್ಷ ಏರಿಳಿತ ಕಂಡ ಒಬ್ಬ ನಾಯಕನ 75ನೇ ಹುಟ್ಟುಹಬ್ಬ ಎಲ್ಲರೂ ಸೇರಿ ಮಾಡ್ತಾ ಇದ್ದೇವೆ. ಇದಕ್ಕೆ ನಮ್ಮ ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು. 

By Suddi9

Leave a Reply

Your email address will not be published. Required fields are marked *