ಅಮ್ಟಾಡಿ: ೧೬ರಂದು ತಹಶೀಲ್ದಾರ್ ಗ್ರಾಮ ವಾಸ್ತವ್ಯ
ಬಂಟ್ವಾಳ: ಇಲ್ಲಿನ ತಹಶೀಲ್ದಾರ್ ಡಾ.ಸ್ಮಿತಾ ರಾಮು ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಅಮ್ಟಾಡಿ ಗ್ರಾಮದಲ್ಲಿ ಇದೇ ೧೬ರಂದು ಬೆಳಿಗ್ಗೆ ಗಂಟೆ ೧೦ರಿಂದ ಸಂಜೆ ಗಂಟೆ ೫ರತನಕ ಅಜೆಕಳ ವಿಶ್ವಕರ್ಮ ಸಭಾ ಭವನದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಅಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಅಲ್ಲಿನ ನಾಗರಿಕರಿಂದ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದೆ.