ಗುರುಪುರ ‘ಶ್ರೀ ಅಗ್ನಿದುರ್ಗಾ ಸಾಂಸ್ಕೃತಿಕ ಭವನ’ಕ್ಕೆ ಶಿಲಾನ್ಯಾಸ
ಕೈಕಂಬ: ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾ ಕಾಲಭೈರವ ದೇವಸ್ಥಾನದಲ್ಲಿ ಜು.09ರಂದು ಶನಿವಾರ ಬೆಳಿಗ್ಗೆ ಶ್ರೀ ಅಗ್ನಿದುರ್ಗಾ ಸಾಂಸ್ಕೃತಿಕ ಭವನಕ್ಕೆ ಶಿಲಾನ್ಯಾಸ ನೆರವೇರಿತು. ಇದೇ ಸಂದರ್ಭದಲ್ಲಿ ದೇವರಿಗೆ ಪ್ರಭಾವಳಿ ಅರ್ಪಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ಡಾ. ರವಿರಾಜ್ ಶೆಟ್ಟಿ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಚಂದ್ರಹಾಸ ಕೌಡೂರು ಬದಿನಮನೆ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ಬಾಬು ಸಾಲ್ಯಾನ್ ತಿರುವೈಲು, ಸೀತಾರಾಮ ಪೂಜಾರಿ ಕರಿಮನೆ, ಸತೀಶ ಪೂಜಾರಿ ಕಂಪ, ಹರಿಪ್ರಸಾದ ರೈ ಕಾರಮೊಗರುಗುತ್ತು, ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಸುನಿಲ್ ಪೂಜಾರಿ ಇಟ್ಟಬಾಗಿಲು ಮತ್ತು ತುಕಾರಾಮ ಪೂಜಾರಿ, ಶೇಖರ ಪೂಜಾರಿ, ಉದಯ ಶಿಲ್ಪಿ, ಜಯಸಿಂಗ ಆಳ್ವ, ಜಗದೀಶ ಆಳ್ವ, ಜಗದೀಶ ಶೆಟ್ಟಿ ತಾರಿಕರಿಯ, ಅಶೋಕ್ ಶೆಟ್ಟಿ ಕುಳಾಯಿಗುತ್ತು ಮತ್ತಿತರರು ಉಪಸ್ಥಿತರಿದ್ದರು.