ಕೈಕಂಬ : ಸತತ ಸುರಿಯುತ್ತಿರುವ ಮಳೆಗೆ ಜು.09ರಂದು ಶನಿವಾರ ರಾತ್ರಿ ಗುರುಪುರ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಬಳಿ ಮರವೊಂದು ಕುಸಿದು ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ಬಿದ್ದು, ಕೆಲವು ತಾಸು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸದ್ಯ ಮರ ತೆರವುಗೊಳಿಸಲಾಗಿದ್ದು, ರಾತ್ರಿಯಿಂದ ಗುರುಪುರ ಆಸುಪಾಸಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ.gur-july-10-gudda kusitha-2

ಗುಡ್ಡ ಕುಸಿತ : ಮರ ಬಿದ್ದ ಮೇಲ್ಗಡೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಹೆದ್ದಾರಿ ಬದಿಯ ವಿದ್ಯುತ್ ತಿಂತಿ ಹಾಗೂ ಕಂಬಗಳು ಕಡಿದು ಬಿದ್ದಿವೆ. ಮಳೆ ಜಾಸ್ತಿಯಾದಲ್ಲಿ ಇನ್ನಷ್ಟು ಮರಗಳೊಂದಿಗೆ ಗುಡ್ಡದ ಮಣ್ಣು ಹೆದ್ದಾರಿಗೆ ಬೀಳಲಿದೆ. ಮೊನ್ನೆ ಹೆದ್ದಾರಿಯಲ್ಲಿ ಬದಿಯಲ್ಲಿ ಅರ್ಧದಷ್ಟು ಗುಡ್ಡ ಕುಸಿದು, ವಾಹನ ಸಂಚಾರಕ್ಕೆ ಇನ್ನೂ ಸಂಚಕಾರವೆನಿಸಿರುವ ಪ್ರದೇಶಕ್ಕಿಂತ ಅನತಿ ದೂರದಲ್ಲಿ ಶನಿವಾರ ರಾತ್ರಿ ಮರ, ಗುಡ್ಡ ಕುಸಿದಿದೆ.gur-july-10-gudda kusitha-1

ಹೆದ್ದಾರಿ ಇಲಾಖೆ ನಿರ್ಲಕ್ಷ್ಯ : ಹೆದ್ದಾರಿ ಬದಿಯಲ್ಲಿ ಅರ್ಧದಷ್ಟು ಗುಡ್ಡ ಕುಸಿದು, ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಅಣೆಬಳಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಅಧಿಕಾರಿಗಳು ಇನ್ನೂ ಸೂಕ್ತ ರಕ್ಷಣಾ ಕ್ರಮ ಕೈಗೊಂಡಿಲ್ಲ. ರಸ್ತೆ ಅಡಿಭಾಗದಲ್ಲಿ ಮಣ್ಣು ಕುಸಿಯುತ್ತಲೇ ಇದ್ದರೂ, ಘನ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಕುಸಿತ ಭಾಗದಲ್ಲಿ ಮಣ್ಣಿನ ಕುಸಿತ ತಡೆಯಲು ಕನಿಷ್ಠ ಪ್ಲಾಸ್ಟಿಕ್ ಹೊದಿಕೆಯನ್ನಾದರೂ ಹಾಸುವಂತೆ ಹೆದ್ದಾರಿ ಇಲಾಖೆಗೆ ಮಾಡಲಾದ ಮನವಿಗೆ ಹೆದ್ದಾರಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

By Suddi9

Leave a Reply

Your email address will not be published. Required fields are marked *