ಮಂಗಳೂರು : ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನೋರ್ವನಿಂದ 3,68,158 ಮೌಲ್ಯದ 140.9 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಅಂಗಿಲ್ಲಾತ್ ಗ್ರಾಮದ ನಿವಾಸಿ ಶನಿದ್ ಅಂಗಿಲ್ಲಾತ್(23) ಎಂದು ಗುರುತಿಸಲಾಗಿದೆ. ಈತ ಮೈಕ್ರೋಓವನ ಮೋಟಾರ್ನ ಒಳಗಡೆ ಚಿನ್ನದ ತುಂಡುಗಳನ್ನು ಅಡಗಿಸಿಟ್ಟು ಸಾಗಿಸಲು ಯತ್ನಿಸುತ್ತಿದ್ದಾಗ ಕಷ್ಟಮ್ ಅಧಿಕಾರಿಗಳ ಕೈಗೆ ಸಿಲುಕಿದ್ದಾನೆ. ಈತ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನದ ಮೂಲಕ ದುಬೈಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದುಬಂದಿದೆ.


