ಗುರುಪುರದಲ್ಲಿ ಗುಡ್ಡ ಕುಸಿತ
ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಅಣೆಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಬದಿಯ ನಿನ್ನೆಯಿಂದ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿಷಯ ತಿಳಿದ ಉತ್ತರ ವಿಧಾನ ಸಭಾ ಶಾಸಕ ಡಾ.ವೈ.ಭರತ್ ಶೆಟ್ಟಿ ಸ್ಥಳಕ್ಕೆ ಆಗಮಿಸಿದರು. ಮೂಡಬಿದಿರೆ ಹಾಗೂ ಬಿ.ಸಿ.ರೋಡು ಕಡೆಯಿಂದ ಆಗಮಿಸುವ ವಾಹನಗಳನ್ನು ಬಜಪೆ ಮಾರ್ಗವಾಗಿ ಮೂಲಕ ಮರವೂರಾಗಿ ಮಂಗಳೂರಿಗೆ ತಲುಪುವಂತೆ ಸೂಚಿಸಲಾಗಿದೆ. .
ಎನ್ಎಚ್ ಮಂಗಳೂರು ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಕೃಷ್ಣಕುಮಾರ್ ಕೇಬಲ್ ಆಗಮಿಸಿದ್ದು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ ಗುರುಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಯಶವಂತ ಶೆಟ್ಟಿ ಸದಸ್ಯರಾದ ಜಿಎಂ ಉದಯ್ ಭಟ್ ರಾಜೇಶ್ ಸುವರ್ಣ ಹಾಗೂ ಹಲವಾರು ಮಂದಿ ಸ್ಥಳದಲ್ಲಿ ಉಪಸ್ಥಿತರಿದ್ದರು.