ಬಂಟ್ವಾಳ: ಪ್ರಿಂಟಿಗ್ ಪ್ರೆಸ್ಗೆ ಕೆಲಸಕ್ಕೆ ಹೋದ ಯುವಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾನೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕೋಟೆಕಣಿ ನಿವಾಸಿ ಬಾಬು ಸಪಲ್ಯರ ಮಗ ಸಂದೀಪ್ 29 ಕಾಣೆಯಾದ ಯುವಕ.

ಈತ ಮೆಲ್ಕಾರನ ಹರ್ಷ ಪ್ರಿಂಟಿಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆಂದು ಹೋದವನು ಅಲ್ಲಿಗೆ ಹೋಗದೆ ರಾತ್ರಿ ಮನೆಗೂ ಬಾರದೆ ಕಾಣೆಯಾಗಿದ್ದಾನೆ ಎಂದು ಇಂದು ಗ್ರಾಮಾಂತರ ಠಾಣೆಗೆ ಈತನ ಮಾವ ನವೀನ್ ದೂರು ನೀಡಿದ್ದಾರೆ. ಈತ ಕಪ್ಪು ಬಣ್ಣದ ಪ್ಯಾಂಟು, ಮತ್ತು ಕಪ್ಪು ಬಿಳಿ ಬಣ್ಣದ ಗೆರೆಗಳಿರುವ ಟೀ ಶಟರ್ು ಹಾಕಿದ್ದಾನೆ, ಕನ್ನಡ ತುಳು ಭಾಷೆ ತಿಳಿದಿರುತ್ತಾನೆ. ಈತನ ಬಗ್ಗೆ ಸುಳಿವು ದೊರೆತಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ತಿಳಿಸುವಂತೆ ಕೋರಲಾಗಿದೆ. ದೂರವಾಣಿ ಸಂಖ್ಯೆ 08255-235000
