ಭಟ್ಕಳ ಶಾಸಕ ಸುನೀಲ್ ನಾಯ್ಕ ಮೇಲೆ ಎಸ್.ಡಿ.ಪಿ.ಐ ಪಕ್ಷ ಪೊಲೀಸ ದೂರು , ನಾಳೆ ಬೆಳಿಗ್ಗೆ ಭಟ್ಕಳ ಪುರಸಭೆ ಮುತ್ತಿಗೆ ಮತ್ತು ಉರ್ದು ನಾಮಫಲಕ ತೆರವು – ಭಟ್ಕಳ ಶಾಸಕ ಸುನೀಲ್ ನಾಯ್ಕ ಮರು ಹೇಳಿಕೆ
ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಈ ವಿಚಾರವಾಗಿ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಜಿಲ್ಲಾ ವರದಿಗಾರರು ಭಟ್ಕಳ ಶಾಸಕ ಸುನೀಲ್ ನಾಯ್ಕ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮಾತನಾಡಿ ಭಟ್ಕಳ ಪುರಸಭೆಯಲ್ಲಿ ಉರ್ದು ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದು ಕಾನೂನು ಬಾಹಿರವಾಗಿದ್ದು , ಇದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ.
ಕನ್ನಡಪರ ಸಂಘಟನೆಗಳ ಹೋರಾಟದ ಮೂಲಕ ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು , ನಾನು ಉರ್ದು ಭಾಷೆಯ ನಾಮಫಲಕ ತೆರವುಗೊಳಿಸಿವಂತೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು , ಜಿಲ್ಲಾಡಳಿತ ಎರಡು ದಿನಗಳ ಕಾಲಾವಕಾಶ ಕೇಳಿದೆ, ಒಂದೊಮ್ಮೆ ಎರಡು ದಿನಗಳಲ್ಲಿ ಭಟ್ಕಳ ಪುರಸಭೆ ಅಳವಡಿಸಿರುವ ಉರ್ದು ಭಾಷೆ ನಾಮಫಲಕವನ್ನು ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ತೆರವುಗೊಳಿಸದ್ದಿದ್ದಲ್ಲಿ ಖುದ್ದಾಗಿ ತಾನು ತನ್ನ ಕಾರ್ಯಕರ್ತರ ಪಡೆಯೊಂದಿಗೆ ಭಟ್ಕಳ ಪುರಸಭೆಗೆ ತೆರಳಿ ಪುರಸಭೆಗೆ ಮುತ್ತಿಗೆ ಹಾಕಿ ಉರ್ದು ಭಾಷೆಯ ನಾಮಫಲಕವನ್ನು ತೆರವುಗೊಳಿಸುತ್ತೇನೆ ಎಂದು ಮಂಗಳವಾರ ತಿಳಿಸಿದರು. ಈ ಹೇಳಿಕೆ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಎಸ್.ಡಿ.ಪಿ.ಐ ಪಕ್ಷ ಗುರವಾರ ಭಟ್ಕಳ ಶಾಸಕ ಸುನೀಲ್ ನಾಯ್ಕ ಮೇಲೆ ಕೇಸು ದಾಖಲಿಸುವಂತೆ ಭಟ್ಕಳ ಡಿ.ವೈ.ಎಸ್ .ಪಿ ಕೆ.ಯು.ಬಿಳಿಯಪ್ಪ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಈ ದೂರಿನ ವಿಚಾರವಾಗಿ ಇಂದು ಮತ್ತೊಮ್ಮೆ ನಮ್ಮ ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಜಿಲ್ಲಾ ವರದಿಗಾರರು ಭಟ್ಕಳ ಶಾಸಕ ಸುನೀಲ್ ನಾಯ್ಕ ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಾತನಾಡಿದ ಶಾಸಕ ಸುನೀಲ್ ನಮ್ಮ ಮೇಲೆ ನೂರು ಕೇಸು ದಾಖಲಿಸಿದರು ನಾನು ಹೆದರುವುದೆಲ್ಲ, ಇದು ಹಿಂದೂಸ್ತಾನ , ಇಂತಹ ಗೊಡ್ಡು ಬೆದರಿಕೆಗಳಿಕೆ ನಾನು ಹೆದರುವುದಿಲ್ಲ, ಉರ್ದು ನಾಮಪಲಕವನ್ನು ಬೇಕಾದರೆ ಹೋಗಿ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಹಾಕಿ ಕೊಳ್ಳಲಿ ಎಂದರು.ಭಟ್ಕಳ ಪುರಸಬೆಯಲ್ಲಿ ಅಳವಡಿಸಿರುವ ಉರ್ದು ನಾಮಫಲಕ ಸಂಪೂರ್ಣ ಕಾನೂನು ಬಾಹಿರ, ಜಿಲ್ಲಾಡಳಿತ 2 ದಿನಗಳಲ್ಲಿ ತೆರವುಗೊಳಿಸುವ ವಿಶ್ವಾಸ ಇದೆ, ಒಂದೊಮ್ಮೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಉರ್ದು ನಾಮಫಲಕ ಇಂದು ತೆರವುಗೊಳಿಸದಿದ್ದಲಿ ನಾಳೆ ಬೆಳಿಗ್ಗೆ ತಾನು ಕನ್ನಡ ಸಂಘಟನೆ ಮತ್ತು ತನ್ನ ಕಾರ್ಯಕರ್ತರೊಂದಿಗೆ ಪುರಸಭೆಗೆ ತೆರಳಿ ,ಮುತ್ತಿಗೆ ಹಾಕಿ ಉರ್ದು ನಾಮಪಲಕವನ್ನು ತೆರವುಗೊಳಿಸುತೇನೆ ಎಂದು ತಿಳಿಸಿದ್ದಾರೆ.