ಕೆಲಸ ಕೊಡಿಸುವುದಾಗಿ ವಂಚನೆ – ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡ ತಂಡ
ತುಮಕೂರು: ಇಲ್ಲಿನ ವಸಂತ ನರಸಾಪುರ ಹಾಗೂ ಅತಂರಸನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ್ಳಿ ಕೆಲಸ ಕೊಡಿಸುತ್ತೆನೆಂದು ಹೇಳಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡು, ಯುವಕರಿಂದ ದುಡ್ಡು ಪೀಕಿಕೊಂಡು ಅನಾಮಧೇಯ ತಂಡವೊಂದು ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ, ಬೆಂಗಳೂರು ಹಾಗೂ ಚಾಮರಾಜ ನಗರದ 20 ಕ್ಕೂ ಹೆಚ್ಚು ಯುವಕರು, ಯುವತಿಯರು ಮೋಸ ಹೋಗಿದ್ದಾರೆ. ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡರೆ, ಯುವಕರಿಂದ ಪ್ರವೇಶ ಶುಲ್ಕ ಎಂದು ಸಾವಿರಾರು ರೂ. ಪೀಕಿದ್ದಾರೆ. ಹೀಗೆ ನೂರಾರು ಯುವಕರಿಂದ ಲಕ್ಷಾಂತರ ರೂ. ಪೀಕಿದ್ದರೆ, ಹಲವಾರು ಯುವತಿಯರನ್ನು ಲೈಂಗಿವಾಗಿ ಬಳಸಿಕೊಂಡಿದ್ದಾರೆ.
ಇತ್ತ ಕೆಲಸ ಇಲ್ಲದೆ ಅತ್ತ ದುಡ್ಡೂ ಇಲ್ಲದೆ ಯುವಕ-ಯುವತಿಯರು ಸಂಕಷ್ಟ ಅನುಭವಿಸಿವಂತಾಗಿದೆ. ಕೆಲ ಯುವತಿಯರು ಲೈಂಗಿಕವಾಗಿ ಬಳಸಿಕೊಂಡ ಫೋಟೋ ವೀಡಿಯೋ ವೈರಲಾಗಿದೆ. ಹಾಗಾಗಿ ಮಾನ ಹರಾಜಾಗಿದೆ. ಈ ಸಂಬಂಧ ಯುವಕರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಕಾಮುಕ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.