ಪುಂಜಾಲಕಟ್ಟೆ: ಸ್ಕೂಟರ್ ಪರಸ್ಪರ ಢಿಕ್ಕಿ: ಸವಾರ ಸಾವು
ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಡಂತ್ಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಸ್ಕೂಟರ್ ಪರಸ್ಪರ ಡಿಕ್ಕಿ ಹೊಡೆದು ಸವಾರೊಬ್ಬರು ಸಾವನ್ನಪ್ಪಿದ ಘಟನೆ ಜೂ26ರಂದು ಭಾನುವಾರ ರಾತ್ರಿ ನಡೆದಿದೆ.
ಮೃತರು ಸ್ಥಳೀಯ ಗಂಪದಡ್ಡ ನಿವಾಸಿ ಹಂಝ ಎಂಬವರ ಪುತ್ರ ನವಾಝ್(೨೪) ಜೂ.26ರಂದು ಭಾನುವಾರ ರಾತ್ರಿ ತಡರಾತ್ರಿ ಮಡಂತ್ಯಾರು ಕಡೆಗೆ ಹೋಗುತ್ತಿದ್ದ ವೇಳೆ ಬೆಳ್ತಂಗಡಿ ತಾಲ್ಲೂಕಿನ ನ್ಯಾಯತರ್ಪು ಗ್ರಾಮದ ಕೆಳಗಿನಬೆಟ್ಟು ಮನೆ ನಿವಾಸಿ ರಾಜೇಶ್ ಎಂಬವರು ತನ್ನ ತಂದೆಯೊಂದಿಗೆ ಎದುರುಗಡೆಯಿಂದ ಬಂದು ಮುಖಾಮುಖಿ ಡಿಕ್ಕಿಯಾಗಿದೆ. ಈ ಮೂವರು ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನವಾಝ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.