ವಾಮದಪದವು ಪ್ರಕೃತಿ ಲಯನ್ಸ್ ಕ್ಲಬ್: ಸೇವಾ ಕಾರ್ಯಗಳ ಸಮರ್ಪಣೆ ವಾಮದಪದವು ಕ್ಲಬ್‌ನ ಸಮಾಜಮುಖಿ ಕಾರ್ಯ ಅಭಿನಂದನೀಯ :ವಸಂತ ಕುಮಾರ್
ಬಂಟ್ವಾಳ: ವಾಮದಪದವು ಪ್ರಕೃತಿ ಲಯನ್ಸ್ ಕ್ಲಬ್ ಇದರ ಆರಂಭಿಕ ವರ್ಷದ ಸೇವಾ ಕಾರ್ಯಕ್ರಮಗಳ ಸಮರ್ಪಣಾ ಕಾರ್ಯಕ್ರಮ ವಾಮದಪದವು, ಕೊರಗಟ್ಟೆ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ಆವರಣದಲ್ಲಿ ಜೂ.25ರಂದು ಶನಿವಾರ ನಡೆಯಿತು.
ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಉತ್ತಮ ಅವಕಾಶವಾಗಿದೆ. ವಾಮದಪದವು ಲಯನ್ಸ್ ಕ್ಲಬ್ ಕಾಲು ದಾರಿ ನಿರ್ಮಾಣದಂತಹ ಮಾದರಿ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಕಾರ್ಯ ನಡೆಸಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಅವರು ವಿವಿಧ ಕೊಡುಗೆಗಳಾದ ವಿದ್ಯಾರ್ಥಿನಿಲಯದಿಂದ ವಾಂಬೆಟ್ಟು ರಸ್ತೆಯಾಗಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 1.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಲು ದಾರಿ ಉದ್ಘಾಟನೆ, ವಿದ್ಯಾರ್ಥಿನಿ ನಿಲಯದ ಧ್ವಜ ಸ್ಥಂಭ ಉದ್ಘಾಟನೆ, ಅಪಘಾತದಲ್ಲಿ ಗಾಯಗೊಂಡ ಸ್ಥಳೀಯ ನಿವಾಸಿ ಪ್ರದ್ಯುನ್ ಅವರಿಗೆ ಚಿಕಿತ್ಸಾ ವೆಚ್ಚವಾಗಿ ಆರ್ಥಿಕ ಸಹಾಯ ಧನ ವಿತರಣೆ ನೆರವೇರಿಸಿದರು. ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿ ಪವಿತ್ರಾ ಅವರು ಸ್ಥಳದಲ್ಲಿ ವಸಂತ ಕುಮಾರ್ ಶೆಟ್ಟಿ ಅವರ ಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ರಚಿಸಿ ಗಮನ ಸೆಳೆದರು. ವಾಮದಪದವು ಲಯನ್ಸ್ ಕ್ಲಬ್ ವತಿಯಿಂದ ವಸಂತ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ, ಪದಾಧಿಕಾರಿಗಳಾದ ಲಕ್ಷ್ಮಣ ಕುಲಾಲ್, ಸಿರಿಲ್ ಡಿಸೋಜ, ವಾಮದಪದವು ಪ್ರಕೃತಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ, ಚೆನ್ನೈತ್ತೋಡಿ ಗ್ರಾ. ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ, ತಾಲೂಕು ಹಿಂದುಳಿದ ಇಲಾಖೆ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್, ಪ್ರಕೃತಿ ಲಯನ್ಸ್ ಕ್ಲಬ್ ಇದರ ಪದಾಧಿಕಾರಿಗಳಾದ ಲಾದ್ರು ಮಿನೇಜಸ್, ಹಂಝ ಬಸ್ತಿಕೋಡಿ, ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಗೋಪಾಲಕೃಷ್ಣ ಚೌಟ, ಸ್ಥಳದಾನಿಗಳಾದ ಯಜ್ಞ ನಾರಾಯಣ ಹೊಳ್ಳ, ಧರ್ಣಪ್ಪ ನಾಕ್, ವಾಮದಪದವು ಲಯನ್ಸ್ ಪದಾಧಿಕಾರಿಗಳಾದ ನವೀನ್ ಚಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ರಮೇಶ್ ಶೆಟ್ಟಿ ಬಜೆ ಮತ್ತಿತರರು ಉಪಸ್ಥಿತರಿದ್ದರು. ಯೋಗೀಶ್ ಕಳಸಡ್ಕ ಸ್ವಾಗತಿಸಿ, ವಂದಿಸಿದರು. ಕಂಬಳ ಪ್ರ. ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು.