ಬಂಟ್ವಾಳ : ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜೂ.27ರಂದು ಸೋಮವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆಯನ್ನು ಆಚರಿಸಲಾಯಿತು.WhatsApp Image 2022-06-27 at 2.07.38 PM

ಉಪತಹಸೀಲ್ದಾರ್ ನವೀನ್ ಬೆಂಜನಪದವು ಅವರು ಸಭೆಯ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಸುಮಾರು ಐನೂರು ವರ್ಷಗಳ ಹಿಂದೆಯೇ ತಮ್ಮ ದೂರದೃಷ್ಟಿಯಿಂದ ಸುಸಜ್ಜಿತ ನಗರವೊಂದನ್ನು ನಿರ್ಮಿಸಿ ಬೆಂಗಳೂರಿನ ನಿರ್ಮಾತೃ ಎಂಬ ಬಿರುದು ಗಳಿಸಿದವರು ಕೆಂಪೇಗೌಡರು ಎಂದು ಹೇಳಿದರು.WhatsApp Image 2022-06-27 at 2.07.38 PM (1)

ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು ಮಾತನಾಡಿ ಕೆಂಪೇಗೌಡರು ನಿರ್ಮಿಸಿದ ದೇವಸ್ಥಾನಗಳು, ರಸ್ತೆಗಳು, ಕೆರೆಗಳು, ಕೋಟೆ ಕೊತ್ತಲಗಳು ಇಂದಿಗೂ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕ ಭಾನುಪ್ರಕಾಶ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *