ಬಲಿದಾನ ದಿವಸದ ಹಿನ್ನೆಲೆಯಲ್ಲಿ ಮಹಾನ್ ಚೇತನಕ್ಕೆ ಪುಷ್ಪನಮನ
ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸದ ಹಿನ್ನೆಲೆಯಲ್ಲಿ ಬಿ.ಸಿ ರೋಡಿನ ಸಂಘ ಕಾರ್ಯಾಲಯದಲ್ಲಿ ಮಹಾನ್ ಚೇತನಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ,ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ,ಉಪಾಧ್ಯಕ್ಷರಾದ ರೋನಾಲ್ಡ್ ಡಿ ಸೋಜ ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.