ಬಂಟ್ವಾಳ: ಅಕ್ರಮ ಸಕ್ರಮ ಫಲಾನುಭವಿಗಳಿಗೆ ಅರಣ್ಯ ಇಲಾಖೆ ಕಾಟ ರೈತ ಸಂಘ ಕೋರ್ಟಿನ ಮೊರೆ ಎಚ್ಚರಿಕೆ
ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಸಕ್ರಮ ಮತ್ತು ೯೪ಸಿ ಮತ್ತಿತರ ಯೋಜನೆಯಡಿ ಸರ್ಕಾರಿ ಜಮೀನು ಮಂಜೂರು ಮಾಡಿಕೊಂಡ ಕೃಷಿಕರು ಮತ್ತು ಬಡ ನಿವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗ ನೋಟೀಸು ಕಳುಹಿಸುವ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಸಂತ್ರಸ್ತರಿಗೆ ನ್ಯಾಯ ನೀಡಬೇಕು. ಇಲ್ಲದಿದ್ದಲ್ಲಿ ರೈತ ಸಂಘ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಎಚ್ಚರಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಣಿನಾಲ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ೨೦ ಕುಟುಂಬಗಳು ಸಹಿತ ಅಪಾರ ಮಂದಿ ರೈತರು ಆತಂಕಗೊAಡಿದ್ದಾರೆ. ಈಗಾಗಲೇ ಡೀಮ್ಡ್ ಫಾರೆಸ್ಟ್ ನಲ್ಲಿ ಕೃಷಿ ಮಾಡಿಕೊಂಡ ರೈತರ ಜಮೀನು ಸಕ್ರಮಗೊಳಿಸಲು ತಿದ್ದುಪಡಿ ತಂದಿರುವುದಾಗಿ ಸರ್ಕಾರ ಹೇಳಿಕೆ ನೀಡುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ತಾಲ್ಲೂಕು ಘಟಕ ಕಾರ್ಯದರ್ಶಿ ಸುದೇಶ್ ಮಯ್ಯ, ಮಹಿಳಾ ವಿಭಾಗ ಕಾರ್ಯದರ್ಶಿ ವಿಲ್ಮಾ ಪ್ರಿಯಾ ಅಲ್ಬುಕರ್ಕ್, ರೋನಾಲ್ಡ್ ಡಿಸೋಜಾ ಅಮ್ಮುಂಜೆ ಇದ್ದರು.