ಬಂಟ್ವಾಳ: ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ರೂ.೨೧ ಲಕ್ಷ ನಿವ್ವಳ ಲಾಭ
ಬಂಟ್ವಾಳ: ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಮದ ಬಿ.ಸಿ.ರೋಡಿನಲ್ಲಿ ಜೂ.21ರಂದು ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯನ್ನು ಸಂಘದ ಹಿರಿಯ ಸದಸ್ಯರು ಉದ್ಘಾಟಿಸಿದರು.
ಬಂಟ್ವಾಳ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ ೮.೩೩ ಕೋಟಿ ಮೊತ್ತದ ವ್ಯವಹಾಸ ನಡೆಸಿ ರೂ ೨೧ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.೧೫ರಷ್ಟು ಡಿವಿಡೆಂಡ್ ವಿತರಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲ್ಲೂಕಿನ ೫೨ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಜೊತೆಗೆ ಬ್ಯಾಂಕಿಂಗ್ ಸೇವೆ, ಕೃಷಿ ನಾಶಕ, ಕೃಷಿ ಉಪಕರಣ ಮತ್ತಿತರ ಸಾಮಾಗ್ರಿ ಮಾರಾಟ ಮಾಡಲಾಗುತ್ತಿದೆ. ಒಟ್ಟು ೩.೪೭ ಎಕರೆ ಜಮೀನು ಹೊಂದಿರುವ ಸಂಸ್ಥೆಯು ೭ ಗೋದಾಮು ಹೊಂದಿದೆ ಎಂದು ಅವರು ವಿವರಿಸಿದರು.
ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ, ನಿರ್ದೇಶಕರಾದ ವೆಂಕಟ್ರಾಯ ಪ್ರಭು, ಉಮೇಶ್ ಪೂಜಾರಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಜ್ಞಾನೇಶ್ವರ ಪ್ರಭು, ಮನೋರಾಜ್ ಎ., ಪಿ.ವೆಂಕಟೇಶ್ ನಾವಡ, ರೋಹಿನಾಥ್ ಕೆ., ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮ ನಾಯ್ಕ ಇದ್ದರು. ಸಿಇಒ ಯು.ಧರ್ಮಪಾಲ ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.