ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಮಂಗಳವಾರ ಬೆಳಿಗ್ಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ಯೋಗ ಪ್ರದರ್ಶಿಸಿದರು.
ಯೋಗಗುರು ಡಾ. ರಘುವೀರ್ ಅವಧಾನಿ, ಪ್ರಮುಖರಾದ ಪ್ರಣಾಮ್ ಅಜ್ಜಿಬೆಟ್ಟು, ಕೆ.ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್, ರಾಮದಾಸ ಬಂಟ್ವಾಳ್, ಪ್ರಕಾಶ್ ಅಂಚನ್, ಡೊಂಬಯ ಅರಳ, ಕೇಶವ ದೈಪಲ, ಗುರುರಾಜ್, ಸತೀಶ್ ಶೆಟ್ಟಿ, ಮಹೇಶ್ ಶೆಟ್ಟಿ, ಶ್ರೀನಿವಾಸ ಪೂಜಾರಿ ಮೇಲ್ಕಾರ್ ಮತ್ತಿತರರು ಇದ್ದರು.