ಸ.ಕಿ.ಪ್ರಾ.ಶಾಲೆ ಮುಳ್ಕಾಡು: ಯೋಗ ತರಗತಿಯ ಉದ್ಘಾಟನೆ
ಕಾರ್ಕಳ :ಸ.ಕಿ.ಪ್ರಾ.ಶಾಲೆ ಮುಳ್ಕಾಡು ಇಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ತರಗತಿಯನ್ನು ಉದ್ಘಾಟಿಸಲಾಯಿತು. ಸಂಘಟಕರಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಶಕಿ ಜಯಲಕ್ಷ್ಮಿ ಯೋಗ ಶಿಕ್ಷಕಿಯಾಗಿ ಅನಿತಾರವರು ಆಗಮಿಸಿ ತರಬೇತಿಯನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕರಾದ ಜನಾರ್ದನ ಬೆಳಿರಾಯ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಉದಯ್ ನಾಯಕ್, ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಗೌರವ ಶಿಕ್ಷಕಿಯರಾದ ನಿಶಾ ಶೆಟ್ಟಿ,ರೂಪಾ, ಪ್ರಫುಲ್ಲ ಶೆಟ್ಟಿ, ಶ್ವೇತಾರವರು ಉಪಸ್ಥಿತರಿದ್ದರು