IMG_8577 IMG_8594ಬಡಗ ಬೆಳ್ಳೂರು :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಜೂ.17ರಂದು ಶುಕ್ರವಾರ ವಾರ್ಷಿಕ ಸಾಮಾನ್ಯಸಭೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡದ ಹಾಲು ಒಕ್ಕೂಟದ ನಿರ್ದೇಶಕಿ ಹಾಗೂ ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ  ಸವಿತಾ ಎನ್ ಶೆಟ್ಟಿ ವಹಿಸಿದ್ದರು.IMG_8583
IMG_8586

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ವೀಣಾ ಎಲ್ ಭಟ್, ದಕ್ಷಿಣ ಕನ್ನಡದ ಹಾಲು ಉತ್ಪಾದಕರ ಒಕ್ಕೂಟದ ಎಂ.ಡಿ. ಅಶೋಕ್ ಅವರನ್ನು ಗೌರವಿಸಲಾಯಿತು. ಒಕ್ಕೂಟದ ಡಾ. ನಿತ್ಯಾನಂದ ಭಕ್ತ , ಡಾ. ಶ್ರೀನಿವಾಸ್,  ವಿಸ್ತಾರಣಾಧಿಕಾರಿ ಜಗದೀಶ್,  ನಿರ್ದೇಶಕರು ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು.

IMG_8590  IMG_8622

By Suddi9

Leave a Reply

Your email address will not be published. Required fields are marked *