ಕೈಕಂಬ: ಗುರುಪುರ ಬೆಳ್ಳೂರುಗುತ್ತಿನ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಗುರುವ ಅವರಿಗೆ ಜೂ.15ರಂದು ಬುಧವಾರ ಬೆಳಿಗ್ಗೆ ಬೆಳ್ಳೂರುಗುತ್ತಿನ ಕುಟುಂಬಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಚಿನ್ನದ ಬಳೆ ಪ್ರದಾನ ಕಾರ್ಯಕ್ರಮ ನಡೆಯಿತು.
ಪ್ರಸಕ್ತ ಸಾಲಿನ ಕೋಲೋತ್ಸವದ ಸಂದರ್ಭದಲ್ಲಿ ದೈವ ನುಡಿದಂತೆ ನಿರ್ದಿಷ್ಟ ದಿನದಂದು ಜೂ.೧೫ ಸಂಕ್ರಮಣದಂದು ಬಳೆ ಪ್ರದಾನಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳ್ಳೂರುಗುತ್ತು ರವೀಂದ್ರ ಶೆಟ್ಟಿ, ಯಶವಂತ ವಿ ಶೆಟ್ಟಿ, ಗರೋಡಿ ಮನೆ ಉಮೇಶ್ ಶೆಟ್ಟಿ, ಸದಾನಂದ ಗಾಂಭೀರ್, ದಿನೇಶ್ ಶೆಟ್ಟಿ, ದೈವಸ್ಥಾನದ ಪರಿಚಾರಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
