ಅಣ್ಣಳಿಕೆ: ೧೯ರಂದು ಮೂರ್ತೆದಾರರ ಸೊಸೈಟಿ ಶಾಖೆ ಆರಂಭ
ಬಂಟ್ವಾಳ: ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೭ ನೇ ಶಾಖೆ ಅಣ್ಣಳಿಕೆ ಶ್ರೀ ಲಕ್ಷ್ಮೀ ಗಣೇಶ್ ಸಂಕೀರ್ಣದಲ್ಲಿ ಇದೇ ೧೯ ರಂದು ಬೆಳಿಗ್ಗೆ ಗಂಟೆ ೯.೪೫ ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಾಖೆ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಗಣಕಯಂತ್ರ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಭದ್ರತಾ ಕೊಠಡಿ ಉದ್ಘಾಟಿಸುವರು ಎಂದರು. ಜಿಲ್ಲಾ ಮೂರ್ತೆದಾರರ ಮಹಾಮಂಡಲ ನಿರ್ದೆಶಕಿ ಉಷಾ ಅಂಚನ್, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಸ್ಥಳೀಯ ಗಣ್ಯರಾದ ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು, ಎಂ.ಪದ್ಮರಾಜ್ ಬಳ್ಳಾಲ್ ಮಾವಂತೂರು, ಮಾರಪ್ಪ ಕುಲಾಲ್, ಎಂ.ಬಿ.ಅಶ್ರಫ್ ಅರಳ, ಅವಿಲ್ ಮಿನೇಜಸ್, ಬ್ಯಾಂಕ್ ಸಂತೋಷ್ ಚೌಟ, ವಸಂತ ಕುಮಾರ್ ಅಣ್ಣಳಿಕೆ ಮತ್ತಿತರು ಭಾಗವಹಿಸುವರು ಎಂದು ತಿಳಿಸಿದರು.
ಕಳೆದ ೧೯೯೧ರಲ್ಲಿ ಆರಂಭಗೊಂಡ ಮೂರ್ತೆದಾರರ ಸೊಸೈಟಿಯು ಬೊಳ್ಳಾಯಿ ಪ್ರಧಾನ ಕಚೇರಿ ಸಹಿತ ಸಿದ್ಧಕಟ್ಟೆ, ವಾಮದಪದವು, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ ಮತ್ತಿತರ ಗ್ರಾಮೀಣ ಜನತೆಗೆ ಗುಣಮಟ್ಟದ ಸೇವೆ ನೀಡಲು ಮುಂದಾಗಿದ್ದು, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಡುಬಡತನ, ಆನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ, ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ ಎಂದರು. ಸಂಘವು ಕಳೆದ ಸಾಲಿನಲ್ಲಿ ರೂ ೧೦ಲಕ್ಷ ಲಾಭ ಗಳಿಸಿ, ಸದಸ್ಯರಿಗೆ ಶೇ ೨೫ರಷ್ಟು ಡಿವಿಡೆಂಡ್ ನೀಡಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನವಾಲು, ನಿರ್ದೇಶಕರಾದ ಅಶೋಕ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪರ್ವ, ಜಯಶಂಕರ್ ಕಾನ್ಸಾಲೆ, ಸಿಇಒ ಮಮತಾ ಜಿ. ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.