ಬಂಟ್ವಾಳ: ರೂ ೧೩೫ ಕೋಟಿ ವೆಚ್ಚದಲ್ಲಿ ಜಕ್ರಿಬೆಟ್ಟು-ನರಿಕೊಂಬು ಸೇತುವೆ ಶೀಘ್ರವೇ ಕಾಮಗಾರಿಗೆ ಚಾಲನೆ: ಶಾಸಕ ರಾಜೇಶ ನಾಯ್ಕ್ ಭರವಸೆ
ಬಂಟ್ವಾಳ: ತಾಲ್ಲೂಕಿನ ಬಾಳ್ತಿಲ ಗ್ರಾಮ ಪಂಚಾಯಿತಿನಲ್ಲಿ ರೂ ೨.೫೦ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಂಗಳವಾರ ಚಾಲನೆ ನೀಡಿದರು. ಡಾ.ಕೆ.ಪ್ರಭಾಕರ ಭಟ್ ಮತ್ತಿತರರು ಇದ್ದಾರೆ.
ನೇತ್ರಾವತಿ ನದಿಯಲ್ಲಿ ನೀರು ಸಂಗ್ರಹಣೆ ಮತ್ತು ನರಿಕೊಂಬು ಗ್ರಾಮ ಸಂಪರ್ಕಿಸುವ ಜಕ್ರಿಬೆಟ್ಟು-ನರಿಕೊಂಬು ನೂತನ ಸೇತುವೆ ರೂ ೧೩೫ ಕೋಟಿ ವೆಚ್ಚದಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ನ ಬಾಳ್ತಿಲ ಗ್ರಾಮ ಪಂಚಾಯಿತಿನಲ್ಲಿ ರೂ ೨.೫೦ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಯಾವುದೇ ಗಲಭೆ ಇಲ್ಲದೆ ಜನತೆ ಶಾಂತಿ, ನೆಮ್ಮದಿಯ ವಾತಾವರಣದಲ್ಲಿ ಬದುಕುತ್ತಿರುವುದು ಮನಸ್ಸಿಗೆ ತೃಪ್ತಿ ತಂದಿದೆ ಎಂದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷಗಳ ಆಡಳಿತಾವಧಿಯಲ್ಲಿ ದೇಶ ಕ್ರಾಂತಿಕಾರಿ ಬದಲಾವಣೆ ಕಂಡಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಿರಣ್ಮಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್.ಎಸ್.ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್., ಪ್ರಮುಖರಾದ ದಿನೇಶ್ ಅಮ್ಟೂರು, ಅನಂತ್ ಶೆಣೈ ಕಂಟಿಕ, ಕೃಷ್ಣಪ್ಪ ಪೂಜಾರಿ ದೋಟ, ಕ.ಕೃಷ್ಣಪ್ಪ, ರವಿ, ಕಮಲಾಕ್ಷಿ ಪೂಜಾರಿ, ಜ್ಯೋತಿ, ಲತೀಶ್ ಕುರ್ಮಾನ್, ಮಮತಾ, ರಂಜಿನಿ, ಶಿವರಾಜ್, ಉಮೇಶ್ ಅರಳ, ಸುದರ್ಶನ್ ಬಜ, ರಮೇಶ್ ಕುದ್ರೆಬೆಟ್ಟು, ಲಕ್ಷ್ಮೀ ಗೋಪಾಲ ಆಚಾರ್ಯ, ಗೋಪಾಲ ಶೆಣೈ ಕಂಟಿಕ, ಗಣೇಶ್ ರೈ ಮಾಣಿ, ಯಶವಂತ ನಾಯ್ಕ್ ನಗ್ರಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ರಾಮಣ್ಣ ಶೆಟ್ಟಿ, ಸುಂದರ ಸಾಲಿಯಾನ್, ಪಿಡಿಒ ಸಂಧ್ಯಾ, ಮೇಲ್ವಿಚಾರಕಿ ಶೋಭಾ, ಗ್ರಾಮಕರಣಿಕ ಯಶ್ವಿತಾ, ರಾಧಾಕೃಷ್ಣ ಅಡ್ಯಂತಾಯ, ರಾಜೇಂದ್ರ ಹೊಳ್ಳ ಇದ್ದರು.
ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಕೆಲವೆಡೆ ಕಾಮಗಾರಿ ಉದ್ಘಾಟನೆಗೊಂಡಿತು. ಚೆನ್ನಪ್ಪ ಆರ್.ಕೋಟ್ಯಾನ್ ಸ್ವಾಗತಿಸಿ, ವಿಠಲ ನಾಯ್ಕ್ ವಂದಿಸಿದರು.