ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊAಡ ವಿದ್ಯಾರ್ಥಿ ವೇದಿಕೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಜೂ.07ರಂದು ಮಂಗಳವಾರ ಚಾಲನೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಾಹಸ ಪ್ರವೃತ್ತಿ ಜೊತೆಗೆ ಇವರಲ್ಲಿ ನಾಯಕತ್ವ ಗುಣ ಒದಗಿಸುವಲ್ಲಿ ವಿದ್ಯಾರ್ಥಿ ವೇದಿಕೆ ಪೂರಕವಾಗುತ್ತದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಗೊಂಡ ವಿದ್ಯಾರ್ಥಿ ವೇದಿಕೆ ಮತ್ತು ವಿಸ್ತೃತ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ಸಿದ್ಧಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಶುಭ ಹಾರೈಸಿದರು.
ಇದೇ ವೇಳೆ ಶಾಸಕ ರಾಜೇಶ ನಾಯ್ಕ್ ಅವರು ವಿಸ್ತೃತ ಕಟ್ಟಡ ಉದ್ಘಾಟಿಸಿದರು. ಸಂಚಾಲಕ ವಿನಯ್ ಎಂ.ಎಸ್. ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಮುಖರಾದ ರತ್ನಕುಮಾರ್ ಚೌಟ, ಆಯುಬ್, ಪ್ರಖ್ಯಾತ್ ರಾಜ್, ಸುದರ್ಶನ್, ದೀಪಕ್ ಶೆಟ್ಟಿಗಾರ್ ಸಿದ್ಧಕಟ್ಟೆ, ಡಾ. ಸುಂದರೇಶ್ ಎನ್., ವಿದ್ಯಾರ್ಥಿ ವೇದಿಕೆ ಪದಾಧಿಕಾರಿಗಳಾದ ಸುಭಾಷ್ ಬಂಗೇರ, ಭಾರತಿ, ಆಶ್ರೀತ್, ರಕ್ಷಾ, ಕಿಶೋರ್, ರುಚಿತಾ ಇದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಗಿರೀಶ್ ಭಟ್ ಅಜೆಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. , ಸಹಾಯಕ ಪ್ರಾಧ್ಯಾಪಕರು ಹನುಮಂತಯ್ಯ ಜಿ.ಎಚ್. ವಂದಿಸಿದರು.
