ಮುಂಬಯಿ: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ಎಂ.ಎ (ಸೆಮಿಸ್ಟರ್, ರೆಗ್ಯೂಲರ್) ಪ್ರಥಮ ವರ್ಷ ತರಗತಿ-೨೦೨೨-೨೦೨೩ನೇ ಸಾಲಿನ ಅಧ್ಯಯನಕ್ಕೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಈ ವರ್ಷ ಆನ್‌ಲೈನ್ ಮತ್ತು ಆಫ್ಲೈನ್ ತರಗತಿಗಳು ಲಭ್ಯವಿದ್ದು, ಈ ಸಾಲಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ ಜುಲೈ ೨೫, ೨೦೨೨ ಎಂದು ವಿಭಾಗದ ಪ್ರಕಟಣೆ ತಿಳಿಸಿದೆ. ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ೨೫,೦೦೦ ರೂಪಾಯಿ ಶಿಷ್ಯವೇತನವನ್ನು ನೀಡುತ್ತದೆ. ತರಗತಿಗೆ ಹಾಜರಾತಿ ಕಡ್ಡಾಯವಾಗಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವಲಿಖಿತ ಅರ್ಜಿಯನ್ನು ಹಾಗೂ ಎಲ್ಲ ದಾಖಲೆಗಳ ಪ್ರತಿಯನ್ನು Dr. G. N. Upadhya, Head, Department of Kannada, University of Mumbai, Ranade Bhavan, Vidyanagari, Santacruz East, Mumbai-400098 ಅಥವಾEmail: kannadadepartment@gmail.com ಈ ವಿಳಾಸಕ್ಕೆ ಜುಲೈ ೨೫ರೊಳಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ-26543530, 26543469,26543345) ಸಂಪರ್ಕಿಸಬಹುದು. (University Website www.mu.ac.in)
ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ರಾನಡೆ ಭವನ, ವಿದ್ಯಾನಗರಿ, ಸಾಂತಾಕ್ರೂಜ್, ಪೂರ್ವ ಮುಂಬಯಿ- ೪೦೦೦೯೮. ಅಥವಾ ಖುದ್ಧಾಗಿ ಈ ವಿಳಾಸಕ್ಕೆ ಸಂಪರ್ಕಿಸಲು ಡಾ| ಜಿ.ಎನ್.ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
