Published On: Sun, May 22nd, 2022

ಬಂಟ್ವಾಳ: ವಿಶ್ವಕರ್ಮ ಸಭಾ ಭವನ ಲೋಕಾರ್ಪಣೆ, ‘ವಿಶ್ವಕರ್ಮ ಯಜ್ಷ’ ರೂ ೨೫ಲಕ್ಷ ಅನುದಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜೆಕಲ ಎಂಬಲ್ಲಿ ರೂ ೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ‘ವಿಶ್ವಕರ್ಮ ಸಭಾ ಭವನ’ವನ್ನು ಕಟಪಾಡಿ ಆನೆಗುಂದಿ ಸಂಸ್ಥಾನ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಮತ್ತು ಹಾಸನ ಅರೆಮಾದನ ಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಶನಿವಾರ ಲೋಕಾರ್ಪಣೆಗೊಳಿಸಿದರು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ, ಶಾಸಕ ರಾಜೇಶ ನಾಯ್ಕ್ ಮತ್ತಿತರರು ಇದ್ದಾರೆ.21btl-Vishwakarma

ದೇಶದಲ್ಲಿ ಕರಕುಶಲ ಮತ್ತು ಸೂಕ್ಷ್ಮ ಕೆತ್ತನೆ ಕೆಲಸ ಕರಗತ ಮಾಡಿಕೊಂಡ ವಿಶ್ವಕರ್ಮ ಸಮುದಾಯಕ್ಕೆ ಬಂಟ್ವಾಳ ವಿಶ್ವಕರ್ಮ ಸಂಘವು ನಿರ್ಮಿಸಿದ ಸುಸಜ್ಜಿತ ಸಭಾ ಭವನ ಮಾದರಿಯಾಗಿದೆ. ಮಂಗಳೂರು ಕಾಳಿಕಾಂಬ ದೇವಸ್ಥಾನಕ್ಕೆ ರೂ ೧ ಕೋಟಿ ಅನುದಾನ ಘೋಷಿಸಿದ್ದು, ಇಲ್ಲಿನ ಸಭಾಂಗಣಕ್ಕೆ ರೂ ೨೫ಲಕ್ಷ ಅನುದಾನ ಒದಗಿಸುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಇಲ್ಲಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಅಜೆಕಲ ಎಂಬಲ್ಲಿ ರೂ ೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ‘ವಿಶ್ವಕರ್ಮ ಸಭಾ ಭವನ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಟಪಾಡಿ ಆನೆಗುಂದಿ ಸಂಸ್ಥಾನ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಮತ್ತು ಹಾಸನ ಅರೆಮಾದನ ಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಸಭಾ ಭವನ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ರಾಜಕೀಯವಾಗಿ ಬಲಿಷ್ಟರಾದಾಗ ಮಾತ್ರ ಹಿಂದುಳಿದ ಸಮುದಾಯ ಬೆಳೆಯಲು ಸಾಧ್ಯ ಎಂದರು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಸಭಾಂಗಣಕ್ಕೆ ಈಗಾಗಲೇ ರೂ ೨೫ಲಕ್ಷ ಅನುದಾನ ಒದಗಿಸಿದ್ದು, ಮುಂದಿನ ದಿನಗಳಲ್ಲಿ ವಿಶ್ವಕರ್ಮ ಕರಕುಶಲ ತರಬೇತಿ ಕೇಂದ್ರ ಅಥವಾ ಎಂಜಿನಿಯರಿAಗ್ ಸಂಸ್ಥೆ ಆರಂಭಿಸಲು ಸರ್ಕಾರದಿಂದ ಜಮೀನು ಮತ್ತು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಶೇ. ೯೫ರಷ್ಟು ಮಂದಿ ವಿಶ್ವಕರ್ಮ ಸಮಾಜ ಹಿಂದುತ್ವ ಬಲಪಡಿಸುವಲ್ಲಿ ಶ್ರಮಿಸುತ್ತಿದೆ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಡಿಮೆ ಸಂಖ್ಯೆಯಲ್ಲಿರುವ ವಿಶ್ವಕರ್ಮ ಸಮಾಜದ ಸಭಾಂಗಣಕ್ಕೆ ನನ್ನ ಅಧಿಕಾರವಧಿಯಲ್ಲಿ ರೂ ೭೫ಲಕ್ಷ ಅನುದಾನ ದೊರಕಿಸಿಕೊಟ್ಟಿದ್ದು, ವಿಶ್ವಕರ್ಮ ಸಮುದಾಯ ಅದನ್ನು ಮರೆತಿಲ್ಲ ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬು ಪತ್ತಾರ್ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಸಿಕ್ಕಿಲ್ಲ. ಇದಕ್ಕಾಗಿ ಬೆಂಗಳೂರಿನಲ್ಲಿ ೧ ಲಕ್ಷ ಮಂದಿ ಸೇರಿಸಿ ಸಮಾವೇಶ ನಡೆಸುವ ಅಗತ್ಯವಿದೆ ಎಂದರು.

ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಹರೀಶ ಆಚಾರ್ಯ, ಸಹಾಯಕ ಎಂಜಿನಿಯರ್ ಕೃಷ್ಣ ಪತ್ತಾರ್ ಮತ್ತು ಶಿವಪ್ರಸನ್ನ ಆಚಾರ್ಯ, ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ, ಸೇವ್ ಲೈಫ್ ಟ್ರಸ್ಟಿನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಶುಭ ಹಾರೈಸಿದರು.

ಇದೇ ವೇಳೆ ಸ್ಥಳದಾನಿ ತುಗುರು ದೀಪಕ್ ಆಚಾರ್ಯ, ದಾನಿಗಳಾದ ಪುಷ್ಪಲತಾ ಜನಾರ್ದನ ಆಚಾರ್ಯ, ಡಾ.ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಸುಧಾಕರ ಆಚಾರ್ಯ ಮಾರ್ನಬೈಲು, ಸುನಿಲ್ ಭಂಡಾರಿಬೆಟ್ಟು, ಕಟ್ಟಡ ವಿನ್ಯಾಸಗಾರ ಸಂದೀಪ್ ಬಿ.ಆಚಾರ್ಯ ಇವರನ್ನು ಸನ್ಮಾನಿಸಿ, ಶಾಸಕ ರಾಜೇಶ ನಾಯ್ಕ್ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಇವರನ್ನು ಗೌರವಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಮಂಗಳೂರು ಕಾಳಿಕಾಂಬ ಕ್ಷೇತ್ರದ ಮೊಕ್ತೇಶರ ಕೇಶವ ಆಚಾರ್ಯ, ರಾಯಚೂರು ವಿಶ್ವಕರ್ಮ ಸಂಘದ ಅಧ್ಯಕ್ಷ ಗುರು ವಿಶ್ವಕರ್ಮ, ರೇಖಾ ಮೋಹನ ಆಚಾರ್ಯ ಬೆಂಗಳೂರು, ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಡಿ.ಆಚಾರ್ಯ, ಪ್ರಮುಖರಾದ ಯೋಗೀಶ ಆಚಾರ್ಯ, ದೀಪಕ್ ಆಚಾರ್ಯ ಇದ್ದರು.

ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ವಂದಿಸಿದರು. ಬಾರ್ಕೂರು ಶ್ರೀ ಕಾಳಿಕಾಂಬ ಕ್ಷೇತ್ರದ ದಯಾನಂದ ಶರ್ಮ ಮತ್ತು ಸಂಘದ ಕೋಶಾಧಿಕಾರಿ ಜಯಚಂದ್ರ ಆಚಾರ್ಯ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ನಡೆದ ‘ವಿಶ್ವಕರ್ಮ ಯಜ್ಞ’ ದಲ್ಲಿ ಸ್ವಾಮೀಜಿ ಸಹಿತ ಅಪಾರ ಮಂದಿ ಭಕ್ತರು ಪಾಲ್ಗೊಂಡರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter