ಬಂಟ್ವಾಳ: ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯ ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ ೧ಲಕ್ಷ ಮೌಲ್ಯದ ಒಣ ಅಡಿಕೆ ಕಳವು ಆಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಮೇ.20ರಂದು ಶುಕ್ರವಾರ ದೂರು ಸಲ್ಲಿಸಿದ್ದಾರೆ. ಇವರು ಗುರುವಾರ ಮಡಿಕೇರಿಗೆ ತೆರಳಿದ್ದು, ಶುಕ್ರವಾರ ಮನೆಗೆ ಬಂದು ನೋಡಿದಾಗ ೮ ಗೋಣಿ ಅಡಿಕೆ ಕಳವಾಗಿದೆ ಎಂದು ಆರೋಪಿಸಿದ್ದಾರೆ.
