ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಮಯ್ಯರಬೈಲು ನಿವಾಸಿ ಬಿ.ನರಸಿಂಹ ಸೋಮಯಾಜಿ (೮೮) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.19ರಂದು ಗುರುವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಏಳು ಮಂದಿ ಪುತ್ರಿಯರು ಇದ್ದರು. ಬಂಟ್ವಾಳ ಪೇಟೆಯಲ್ಲಿ ಹಲವು ವರ್ಷಗಳಿಂದ ಜವುಳಿ ಉದ್ಯಮ ನಡೆಸಿ ಜನಪ್ರಿಯರಾಗಿದ್ದರು.